ಹುಬ್ಬಳ್ಳಿ,ಅ.30: ಕರ್ನಾಟಕ ವಿಶ್ವವಿದ್ಯಾಲಯದ 2019-20ನೇ ಸಾಲಿನ ಬಿ.ಇ.ಡಿ. ವಾರ್ಷಿಕ ಪರೀಕ್ಷೆಯಲ್ಲಿ ನಗರದ ಸನಾ ಶಿಕ್ಷಣ ಮಹಾವಿದ್ಯಾಲಯದ ಕುಮಾರಿ ಮರ್ಲಿನ್ ಹೊಂಗಲ್ ಶೇ. 93-29 ಅಂಕಗಳಿಸಿ 4ನೇ ರ್ಯಾಂಕ್ ಪಡೆದು ಬಾಲ್ಯಾವಸ್ಥೆ ಮತ್ತು ತಾರುಣ್ಯಾವಸ್ಥೆ ಕಲಿಕಾ ಬೋಧನಾ ಪ್ರಕ್ರಿಯೆಗಳು ಎಂಬ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಸನಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಎಂ. ಮಳಗಿ, ಮ್ಯಾನೇಜಿಂಗ್ ಟ್ರಸ್ಟಿ ಅಶ್ರಫ ಅಲಿ, ಬಶೀರ್ ಅಹ್ಮದ, ಟ್ರಸ್ಟಿಗಳಾದ ಖಾಲಿದ ಮಳಗಿ,
ಆಯೂಬ ಸವಣೂರ, ಮೊಹಮ್ಮದ ತಾರೀಖ್, ಮುಜಾಹಿದ್, ಆಡಳಿತ ಅಧಿಕಾರಿಯಾದ ಶ್ರೀಮತಿ ಅಂಜುಮ್ ಖಾನ್ ಕಾಲೇಜೀನ ಪ್ರಚಾರ್ಯರಾದ ಡಾ. ಆರ್.ಎಸ್. ಪಟಗೆ, ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಅಭಿನಂದಿಸಿದರು.