ಸುವರ್ಣ ಗ್ರಾಮಪಂಚಾಯತಿಗಾಗಿ ಮನವಿ

ಕಲಬುರಗಿ ಜು 24: ತಾಲೂಕಿನ ಬಸವಪಟ್ಟಣ ಗ್ರಾಪಂ ಮತ್ತು ಮಲ್ಲಾಬಾದದ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸ್ವಚ್ಛಭಾರತ ಮಿಷನ್ ಯೋಜನೆಯಡಿ ಐಇಸಿ ಚಟುವಟಿಕೆಗಳ ಕುರಿತು ಉಪನ್ಯಾಸ ಮತ್ತು ಸ್ಟಿಕರ್ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೇಖಪ್ಪ ಶಂಕು ಮಾತನಾಡಿ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಬಸವಪಟ್ಟಣ ಗ್ರಾಪಂ ಅನ್ನು sಸುವರ್ಣ ಗ್ರಾಪಂ ಆಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.ವೇದಮೂರ್ತಿ ಚಂದ್ರಶೇಖರಯ್ಯ ಹಿರೇಮಠ,
ಗ್ರಾಪಂ ಅಧ್ಯಕ್ಷ ಬೈಲಪ್ಪ ಸಣಮನಿ,ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.