
*ಸುವರ್ಣಗೆಡ್ಡೆ – ೧/೪ ಕೆ.ಜಿ
*ಕಾರ್ನ್‌ಫ್ಲೋರ್ – ೧/೨ ಚಮಚ
*ಮೈದಾ ಹಿಟ್ಟು – ೧ ಚಮಚ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಜೀರಿಗೆ ಪುಡಿ – ೧/೨ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧/೨ ಚಮಚ
*ಗರಂ ಮಸಾಲ – ೧/೨ ಚಮಚ
*ಸೋಯಾಸಾಸ್ – ೧/೨ ಚಮಚ
*ಉಪ್ಪು – ೧/೨ ಚಮಚ
*ಎಣ್ಣೆ – ೧/೨ ಲೀಟರ್
*ನೀರು –
ಮಾಡುವ ವಿಧಾನ :
ಸುವರ್ಣಗೆಡ್ಡೆಯನ್ನು ಚೌಕಾಕಾರವಾಗಿ ಚಿಕ್ಕ ಚಿಕ್ಕದಾಗಿ ಹೆಚ್ಚಿ, ಉಪ್ಪು ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ಕಡಾಯಿಗೆ ಸುವರ್ಣಗೆಡ್ಡೆ, ಅಗತ್ಯವಿದ್ದಷ್ಟು ನೀರು ಹಾಕಿ ಬೇಯಿಸಿ. ಬೌಲ್‌ಗೆ ಅಚ್ಚಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬೇಯಿಸಿಟ್ಟುಕೊಂಡ ಸುವರ್ಣಗೆಡ್ಡೆ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ. ಕಾದ ಎಣ್ಣೆಯಲ್ಲಿ ಹದವಾಗಿ ಕರಿಯಿರಿ. ಈಗ ಸುವರ್ಣಗೆಡ್ಡೆ ಫ್ರೈ ಸವಿಯಲು ಸಿದ್ಧ.