ಸುವರ್ಣಗೆಡ್ಡೆ ಫ್ರೈ

ಬೇಕಾಗುವ ಪದಾರ್ಥಗಳು:
(ಭಾಗ – ೧)

 • ಧನಿಯಾಪುಡಿ – ೨ ಚಮಚ
 • ಉಪ್ಪು – ಸ್ವಲ್ಪ
 • ಅಕ್ಕಿಹಿಟ್ಟು – ೨ ಚಮಚ
 • ಜೋಳದಹಿಟ್ಟು – ೨ ಚಮಚ
 • ಅಚ್ಚಖಾರದಪುಡಿ – ೨ ಚಮಚ
 • ಅರಿಶಿನ – ೧ ಚಮಚ
  (ಈ ಎಲ್ಲಾ ಪದಾರ್ಥಗಳನ್ನು ಸೇರಿಸಿ, ನೀರನ್ನು ಹಾಕದೆ ಮಸಾಲಪುಡಿಯನ್ನು ಮಾಡಿಕೊಳ್ಳಬೇಕು)
 • ಸುವರ್ಣಗೆಡ್ಡೆ – ಬೇಕಾಗುವಷ್ಟು
 • ವಿನಿಗರ್/ನಿಂಬೆರಸ – ಸ್ವಲ್ಪ
 • ಉಪ್ಪು – ಸ್ವಲ್ಪ
 • ಎಣ್ಣೆ – ಸ್ವಲ್ಪ

ವಿಧಾನ: ಸುವರ್ಣಗೆಡ್ಡೆಯನ್ನು ತ್ರಿಕೋನಾಕಾರದಲ್ಲಿ ಹೆಚ್ಚಿ ವಿನಿಗರ್ ಮತ್ತು ಉಪ್ಪು ಹಾಕಿ ಕಲೆಸಿ, ಮುಕ್ಕಾಲು ಭಾಗ ಬೇಯಿಸಬೇಕು. ಬೆಂದ ಸುವರ್ಣಗೆಡ್ಡೆಯನ್ನು ತಯಾರಾದ ಮಸಾಲೆಪುಡಿಯಲ್ಲಿ ಎರಡೂ ಭಾಗ ಹೊರಳಿಸಿ, ಎಣ್ಣೆ ಹಾಕಿದ ಪ್ಯಾನ್‌ನಲ್ಲಿ ಹಾಕಿ ತಟ್ಟೆಮುಚ್ಚಿ ಹಬೆಯಲ್ಲಿ ೫ ನಿಮಿಷ ಬೇಯಿಸಬೇಕು.