ಸುಳ್ಳು ಭರವಸೆಯ ಗ್ಯಾರೆಂಟಿ ಕಾರ್ಡು ಹಣ ಬಲದಿಂದ ಗೆದ್ದ ಕಾಂಗ್ರೆಸ್: ಶಿವಕುಮಾರ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.14: ಕಾಂಗ್ರೆಸ್ ನವರು ನೀಡಿದ ಗ್ಯಾರೆಂಟಿ ಕಾರ್ಡಿನ ಸುಳ್ಳು ಬರವಸೆಗಳು ಮತ್ತು ಹಣ ಬಲದಿಂದ ಕಾಂಗ್ರೆಸ್  ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು.  ಅವರು ನೀಡಿದ ಭರವಸೆಗಳನ್ನು ಈಡೇರಿಸದಿದ್ದರೇ ರಾಜ್ಯದ ಜನರೇ ಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ಶಿವಕುಮಾರ್  ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.  ರಾಜ್ಯದ ಮತದಾರರು ನೀಡಿದ ತೀರ್ಪುನ್ನು ಎಲ್ಲರೂ ಸ್ವಾಗತಿಸಬೇಕು, ಕಾಂಗ್ರೆಸ್ ಗೆ ಜನರು ಆರ್ಶಿವಾದ ಮಾಡಿದ್ದಾರೆ, ಇದನ್ನು ನಾನೂ ಸ್ಚಾಗತಿಸುವೆ ಎಂದಿದ್ದಾರೆ.
ಕಾಂಗ್ರೆಸ್ ಗೆಲುವು ಸಾಧಿಸಿದ್ದು ಸುಳ್ಳು ಭರವಸೆಗಳಿಂದ, ಹಣದ ಆಮಿಷದಿಂದ ಮತದಾರರನ್ನು ದಾರಿ ತಪ್ಪಿಸಿದ್ದಾರೆ. ಇವರೇ ಪಕ್ಷ ಅಧಿಕಾರದಲ್ಲಿರುವ ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಕೊಡದ ಗ್ಯಾರೆಂಟಿ ಇಲ್ಲಿ ಹೇಗೆ ಕೊಡುತ್ತಾರೆ. ಕಾದು ನೋಡೋಣ ಕೊಡದಿದ್ದರೆ. ಅದರಲ್ಲೂ ತಾರತಮ್ಯ ಮಾಡಿದರೆ ಮತದಾರರೇ ಮುಂದೆ ತಕ್ಕ‌ಪಾಠ ಕಲಿಸುತ್ತಾರೆ.
ರಾಜ್ಯದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಪ್ರಭಲ ಪೈಪೋಟಿ ನೀಡಿದೆ.  ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಮ್ಮ ಕೆಲ ಕಾರ್ಯಕರ್ತರು,  ಮುಖಂಡರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಇದರಿಂದ ನಮಗೆ ಹಲವಡೆ ಸೋಲಾಗಿರಬಹುದು. ಜಿಲ್ಲೆಯಲ್ಲೂ  ನಾನಾ ಆಮಿಷಕ್ಕೆ ಒಳಗಾಗದ ನಮ್ಮ‌ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಮತ್ತು ಕೆಆರ್ ಪಿ ಪಕ್ಷ ಬೆಂಬಲಿಸಿದ್ದಾರೆ, ಇದು ನಮಗೆ ಸೋಲಿಗೆ ಕಾರಣವಾಗಿದೆ. ಪಕ್ಷದಲ್ಲೇ ಇದ್ದು, ಎಲ್ಲವನ್ನು ಪಡೆದು ದ್ರೋಹ ಮಾಡಿದ್ದಾರೆಂದಿದ್ದಾರೆ.
ಬರುವ ದಿನಗಳಲ್ಲಿ ಅವರು ಪಶ್ಚತ್ತಾಪದಿಂದ  ಎಲ್ಲರೂ ಮಾತೃ ಪಕ್ಷಕ್ಕೆ ಮರಳುವ ವಿಶ್ವಾಸವಿದೆ. ಸೊಲಿನಿಂದ ಹತಾಷರಾಗದೇ ಇಂದಿನಿಂದಲೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ, ರಾಜ್ಯದಲ್ಲಿ ಮುಂಬರುವ ಲೋಕಸಭೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಮತ್ತೆ ಕಮಲ ಅರಳಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ‌