ಸುಳ್ಳು ದಾಖಲೆ ಸೃಷ್ಠಿಸಿ ನಿಯಮಬಾಹಿರವಾಗಿ ಸ್ಥಳ ಮಂಜೂರು-ಕ್ರಮಕ್ಕೆ ಒತ್ತಾಯ

ರಾಯಚೂರು,ಅ.೨೯- ದೇವದುರ್ಗ ಪುರಸಭೆಯಿಂದ ನಿಯಮ ಬಾಹಿರವಾಗಿ ಸರ್ಕಾರಿ ಸ್ಥಳವನ್ನು ಬಸವೇಶ್ವರ ವಿದ್ಯಾಸಂಸ್ಥೆಗೆ ನೀಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅಳ್ಳಪ್ಪ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ಧೆಶಿಸಿ ಮಾತನಾಡಿ, ದೇವದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸ್ಥಳವನ್ನು ನಿಯಮಬಾಹಿರವಾಗಿ ಬಸವೇಶ್ವರ ವಿದ್ಯಾಸಂಸ್ಥೆಗೆ ನೀಡಲಾಗಿದೆ. ಈ ಕುರಿತು ಮಾಹಿತಿ ಕಾಯ್ದೆಯಡಿ ಮಾಹಿತಿ ಕೇಳಿದರೆ, ಅನತ್ಯವಾಗಿ ಅಧಿಕಾರಿಗಳು ವಿಳಂಬ ಮಾಡಿ, ನಕಲಿ ದಾಖಲೆ ಸೃಷ್ಠಿಸಿ ನೀಡಿದ್ದಾರೆ. ಒಮ್ಮೆ ದಾನ ಸ್ಥಳವನ್ನು ಪುರಸಭೆ ಬೇರೆಯವರಿಗೆ ಲೀಸ್ ನೀಡಬಹುದೇ ಹೊರತು ಯಾರಿಗೆ ಪುಕ್ಕಟ್ಟೆಯಾಗಿ ನೀಡಲು ಅವಕಾಶವಿಲ್ಲ. ಆದರೂ ಸ್ಥಳ ಮಂಜೂರು ಮಾಡಿರುವಂತೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದರು.
ಈ ಪ್ರಕರಣದಲ್ಲಿ ಹಲವಾರು ಅಧಿಕಾರಿಗಳು ಶಾಮೀಲಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಅಕ್ರಮವಾಗಿ ಶಾಲೆ ನಡೆಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.