ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ತಹಸಿಲ್ದಾರ ವಿರುದ್ಧ ಕ್ರಮ ಕೈಗೊಳ್ಳಿ

ಔರಾದ್:ಡಿ.31: ರಾಜ್ಯದ ಪಶು ಸಂಗೋಪನೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ ಚವ್ಹಾಣ ಅವರಿಗೆ ಸುಳ್ಳು ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡಿದ ಔರಾದ್ ಗ್ರೇಡ್-2 ತಹಸಿಲ್ದಾರ್ ಮಲಶೆಟ್ಟಿ ವಿರೂದ್ಧ ಕ್ರಮ ಜರುಗಿಸುವಂತೆ ಚಾಂದೋರಿ ಗ್ರಾಮ್ ಪಂಚಾಯತ್ ಸದಸ್ಯ ದೀಪಕ ಪಾಟೀಲ ಚಾಂದೋರಿ ಆಗ್ರಹಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿರುವ ಅವರು, ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ ಚವ್ಹಾಣ ಅವರು 2013ರಲ್ಲಿ ಔರಾದ್ ತಹಸಿಲ್ದಾರ್ ಅವರಿಂದ ಸುಳ್ಳು ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ಮಧೋಳ ಗ್ರಾಮದ ಧನರಾಜ ಹಾಗೂ ಹಾಲಳ್ಳಿ ಗ್ರಾಮದ ನಾಮದೇವ ಅವರು ರಾಷ್ಟ್ರೀಯ ಎಸ್.ಸಿ ಆಯೋಗದಲ್ಲಿ ಪ್ರತೀಕ ವಿರೂದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ದೂರು ಸಲ್ಲಿಸಿದರು. ಆಯೋಗವು 2018ರಲ್ಲಿ ಬೀದರ್ ಜಿಲ್ಲಾಧಿಕಾರಿಗಳಿಗೆ ವಿಚಾರಣೆ ನಡೆಸುವಂತೆ ಸೂಚಿಸಿತು. ಆಗಿನ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರು ವಿಚಾರಣೆ ನಡೆಸಿದ್ದರು. ದೂರುದಾರರ ಪರವಾಗಿ ಬೀದರ್‍ನ ನ್ಯಾಯವಾದಿ ಸಂಜಯ ಮಠಪತಿ ಹಾಗೂ ಪ್ರತೀಕ ಅವರ ಪರವಾಗಿ ಅಶೋಕ ಹಾರ್ನಳ್ಳಿ ವಾದ-ಪ್ರತಿವಾದ ಮಂಡಿಸಿದರು. ರಾಮಚಂದ್ರನ್.ಆರ್ ಅವರು ವರ್ಗಾವಣೆ ಆದ ಬಳಿಕ ಹಾಲಿ ಡಿ.ಸಿ ಗೋವಿಂದರೆಡ್ಡಿ ಬಂದ ಬಳಿಕ ಒಂದು ಬಾರಿಯೂ ವಿಚಾರಣೆ ನಡೆಸದೇ ಇರುವುದು ವಿಪರ್ಯಾಸ. ಆ ಸಮಯದಲ್ಲಿ 23ರಲ್ಲಿ ಸಲ್ಲಿಸಿದ ಅಪಿಲಿನಲ್ಲಿ ಮೊದಲನೇ ಪಾರ್ಟಿಯಾಗಿ ತಹಸಿಲ್ದಾರ್ ಮಲಶೆಟ್ಟಿ ಅವರು ಹಾಜರಾಗಿದ್ದರು.

ಪ್ರತೀಕ ಚವ್ಹಾಣ ತಂದೆಯ ಪ್ರಭಾವ ಬಳಿಸಿ ನಕಲಿ ದಾಖಲೆಗಳು ನೀಡಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ತಂದೆ ಒಬ್ಬ ಶಾಸಕರಾಗಿದ್ದರೂ ಸಹ ಆದಾಯ ಪ್ರಮಾಣದಲ್ಲಿ ಕೇವಲ 1 ಲಕ್ಷ ಆದಾಯ ತೋರಿಸಿದ್ದಾರೆ. ವಯಸ್ಸು 16 ಇದ್ದರೆ ತನ್ನ ಸಹೋದರಿಯ ದಾಖಲಾತಿ ಬಳಿಸಿ 18 ವರ್ಷ ತೋರಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಪಡೆದಿರುವ ಈ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಸಂಪೂರ್ಣ ಮಿಥ್ಯವಾಗಿದ್ದು, ಇದನ್ನು ವಿಚಾರಣೆ ನಡೆಸುವಂತೆ ಎಸ್.ಸಿ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಇದು ಇನ್ನು ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಇದೇ ತಹಸಿಲ್ದಾರ್ ಮಲಶೆಟ್ಟಿ ಅವರು ಪ್ರತೀಕ ಚವ್ಹಾಣ ಅವರಿಗೆ ಆಗಸ್ಟ್ 16ರಂದು ಮತ್ತೊಂದು ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ. ಅವರ ತಂದೆ ಪ್ರಭು ಚವ್ಹಾಣ ಅವರ ಕೇಸ್ ಈಗಾಗಲೇ ಕರ್ನಾಟಕ ಉಚ್ಚ ನ್ಯಾಉಯಾಲಯದಲ್ಲಿ 200031-32ದಲ್ಲಿ ತೀರ್ಪು ಕಾಯ್ದಿರಿಸಿರುವಾಗ ಕಾನೂನಿನ ಗಂಭೀರತೆ ಅರಿಯದ ಮಲಶೆಟ್ಟಿ ಅವರು ಮತ್ತೊಂದು ಜಾತಿ ಪ್ರಮಾನ ಪತ್ರ ನೀಡಿ ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಾರೆ. ಹಾಗೇ ಪ್ರಭು ಚವ್ಹಾಣ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಈ ದಾಖಲಾತಿ ನೀಡಿರುವುದು ಅಕ್ಷಮ್ಯ ಅಪರಾಧ ಇವರ ವಿರೂದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು, ಇಲ್ಲವಾದರೆ ಕಾನೂನು ಸಮರ ಸಾರುವುದಾಗಿ ಪಾಟೀಲ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.