ಸುಳ್ಳು ಜಾತಿ ಪ್ರಮಾಣ ಪತ್ರ-ಕ್ರಮಕ್ಕೆ ಒತ್ತಾಯ

ಕೋಲಾರ,ಜು.೩೦: ರಾಜ್ಯಾದ್ಯಂತ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಎಸ್.ಸಿ/ಎಸ್.ಟಿ ಮೀಸಲಾತಿ ನುಂಗುತ್ತಿರುವ ಬೇಡ ಜಂಗಮ, ಬುಡಗ ಜಂಗಮ, ಇತರೆ ೧೨ ಜಾತಿಗಳನ್ನು ಎಸ್.ಸಿ/ಎಸ್.ಟಿ ಪಟ್ಟಿಯಿಂದ ಕೈ ಬಿಟ್ಟು ಇದರ ಅಡಿಯಲ್ಲಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆದಿರುವ ಕೊತ್ತೂರು ಮಂಜುನಾಥ, ಬಾಬು ಚಿಂಚನ ಸೂರು ಸೇರಿದಂತೆ ಇತರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲು ಭಾರತೀಯ ಚುನಾವಣಾ ಆಯೋಗಕ್ಕೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಆಯೋಗಕ್ಕೆ, ಕೋಲಾರ ಜಿಲ್ಲಾಧಿಕಾರಿಗಳ ಮುಖಾಂತರ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಹಿರಿಯ ಮುಖಂಡ ಟಿ. ವಿಜಿಕುಮಾರ್, ಈ ದೇಶದ ಅಸ್ಪೃಶ್ಯರ ಜಾತಿಗಳಿಗೆ ಅನುಗುಣವಾಗಿ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಭಾರತದ ಸಂವಿಧಾನ ಅನುಚ್ಚೇದ ೧೪/೧೫,೧೬ ಮತ್ತು ೧೬ಂ ಹಾಗೂ ೧೭ ಕಲಂಗಳಲ್ಲಿ ಎಲ್ಲಾ ರಂಗದಲ್ಲಿ ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಮೀಸಲಾತಿಯನ್ನ ಕಬಳಿಸುವ ಜನ ಕಳೆದ ೪೦ ವರ್ಷಗಳಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ೧೭೦೦೦ ನೌಕರರು ನೌಕರಿ ಗಿಟ್ಟಿಸಿಕೊಂಡು ದ್ರೋಹ ಬಗೆದಿದ್ದಾರೆ ಬೀದರ್ ಜಿಲ್ಲೆಯ ಕ್ಷೇತ್ರದ ಶಾಸಕರಾದ ಪ್ರಭು ಚೌಹಾಣ್, ಕೋಲಾರ ಜಿಲ್ಲೆಯ ಮುಳಬಾಗಿಲಿನ ಮಾಜಿ ಶಾಸರಾದ ಕೊತ್ತೂರು ಮಂಜುನಾಥ, ಬುಡುಗ ಜಂಗಮ ಜಾತಿ ಹೆಸರಿನಲ್ಲಿ ಸೌಲಭ್ಯ ಪಡೆದು ಮಜಾ ಮಾಡಿದ್ದಾರೆ. ಈಗಾಗಲೇ ಈ ಜಾತಿ ಪ್ರಮಾಣ ಪತ್ರವನ್ನು ಅಸಿಂಧು ಗೊಳಿಸಲಾಗಿದೆ.
ಕೂಡಲೇ ಇವರನ್ನ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ಚುನಾವಣಾ ಆಯೋಗ ಮಧ್ಯ ಪ್ರವೇಶಿಸಬೇಕೆಂದು ಹಾಗೂ ರಾಜ್ಯ ಹೈಕೋರ್ಟ್ ಜಾತಿ ಪ್ರಮಾಣ ವಿಚಾರದಲ್ಲಿ ಕೊತ್ತೂರು ಮಂಜುನಾಥ್ ಮೇಲೆ ಹೂಡಿರುವ ಮೊಕದ್ದಮೆಯನ್ನು ಹೈಕೋರ್ಟ್ ತಡೆ ನೀಡಿರುವುದನ್ನ ತೆರವುಗೊಳಿಸಿ ಬಂಧಿಸಬೇಕೆಂದು ಎಸ್.ಸಿ/ಎಸ್.ಟಿ ಆಯೋಗವನ್ನು ಕೋರಿದರು. ಈ ಸಂದರ್ಭದಲ್ಲಿ ಪಂಡಿತ್ ಮುನಿವೆಂಕಟಪ್ಪ, ಸೂಲಿಕುಂಟೆ ರಮೇಶ್, ವೈ.ಎಸ್.ಎಸ್.ಸಬ್ಬು, ಪೇಟೀಚಾಮನಹ ಹಾರೋಹಳ್ಳಿ ರವಿ, ಮದನಹಳ್ಳಿ ವೆಂಕಟೇಶ, ಸಮತ ಸೈನಿಕ ದಳದ ಅಂಬರೀಶ್ ಇನ್ನಿತರರು ಉಪಸ್ಥಿತರಿದ್ದರು.