ಸುಳ್ಳು ಜಾತಿ ನಿಂದನೆ ಪ್ರಕರಣ ಕೈಬಿಡಿ

ಹಗರಿಬೊಮ್ಮನಹಳ್ಳಿ. ಸೆ.16 ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಗ್ರಾಮದ ಗಂಗಾಮತ ಸಮಾಜದ ಮುಖಂಡ ಬಾರಿಕರ ಶಿವಪ್ಪ ಅವರ ವಿರುದ್ಧ ದಾಖಲಿಸಿರುವ ಜಾತಿನಿಂದನೆ ಸುಳ್ಳು ಪ್ರಕರಣವನ್ನು ಕೈಬಿಡುವಂತೆ ಒತ್ತಾಯಿಸಿ ತಾಲೂಕು ಗಂಗಾಮತ ಸಮಾಜದ ಪದಾಧಿಕಾರಿಗಳು ತಹಶೀಲ್ದಾರ್  ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
 ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್ ಮಾತನಾಡಿ ವಿನಾಕಾರಣ ಘಟನೆಯಲ್ಲಿ ಪಾಲ್ಗೊಳ್ಳುವುದರಿಂದ ಶಿವಪ್ಪ ಅವರ ವಿರುದ್ಧ ಸುಳ್ಳು ಜಾತಿನಿಂದ ಪ್ರಕರಣ ದಾಖಲಿಸಿರುವುದು ಖಂಡನೀಯ. ಈ ರೀತಿ ಸುಳ್ಳು ಕೇಸು ಹಾಕುವ ಮೂಲಕ ಜೀವನ ಮಾಡುವುದು ಕಷ್ಟಕರವಾಗಿದೆ ಈ ಕೂಡಲೇ ಸುಳ್ಳು ಪ್ರಕರಣವನ್ನು ತಕ್ಷಣವೇ ಕೈಬಿಟ್ಟು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದರು.
 ತಹಶೀಲ್ದಾರ್ ಶರಣಮ್ಮ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬಿ ರೇವಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರ್ದಾರ ಯಮನೂರ್  ಮುಖಂಡರಾದ ಚಂದ್ರ ಪಕೀರಪ್ಪ ನಿಂಗಪ್ಪ ಗೋವಿಂದಪ್ಪ ನಾರಾಯಣಪ್ಪ ಹಡಗಲಿ ಜಗದೀಶ್, ಅಂಬಿಗರ ಕೊಟ್ರೇಶ್ ಕೊಳ್ಳೆ ವೆಂಕಟೇಶ್ ಗವಿಸಿದ್ದೇಶ್  ಇತರರು ಇದ್ದರು.