ಸುಳ್ಳು ಗ್ಯಾರೆಂಟಿಗೆ ಮರುಳಾಗದಿರಿ

(ಸಂಜೆವಾಣಿ ವಾರ್ತೆ)
ರಾಯಚೂರು, ಏ.೮-
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸುಳ್ಳಿನ ಸರಮಾಲೆಯ ಮೂಲಕ ಅಧಿಕಾರಕ್ಕೆ ಬಂದಿದ್ದು ಬಣ್ಣದ ಮಾತಿಗೆ ಮರುಳಾಗದೆ , ವಿಶ್ವದ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಶಾಶ್ವತ ಗ್ಯಾರೆಂಟಿ ಯೋಜನೆ ನೋಡಿ ಬಿಜೆಪಿಗೆ ಮತ ನೀಡಿ ಎಂದು ಸಂಸದರಾದ ರಾಜಾಅಮರೇಶ್ವರ್ ನಾಯಕರವರು ತಿಳಿಸಿದರು.
ಮಟಮಾರಿ ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಮೈತ್ರಿ ಪಕ್ಷಗಳ ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರಮೋದಿ ಅವರ ಸರ್ಕಾರ ಕಳೆದ ೧೦ ವರ್ಷದಲ್ಲಿ ಹಲವು ಮಹಾತ್ವಕಾಂಕ್ಷೆ ಯೋಜನೆಗಳನ್ನು ಜಾರಿಗೆ ತಂದಿದ್ದು ಮೋದಿ ಗ್ಯಾರೆಂಟಿ ಆದ್ಯತೆ ನೀಡಿ.
ನಾನು ಕಳೆದ ಐದು ವರ್ಷದಲ್ಲಿ ರಾಯಚೂರು – ಯಾದಗಿರಿ ವಿಶಾಲ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದೇನೆ , ರೈಲ್ವೆ ಯೋಜನೆಗಳ ಕಾರ್ಯಗತ, ರೈಲು ಸಂಪರ್ಕ ವಿಸ್ತರಣೆ , ಹೆದ್ದಾರಿಗಳ ನಿರ್ಮಾಣ ಗ್ರಾಮೀಣ ಕ್ಷೇತ್ರದಲ್ಲಿ ಜಲಜೀವನ ಮಿಷನ್ ನಂತಹ ಯೋಜನೆಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಮಾಡಿರುವೆ. ರಾಯಚೂರಿನ ಸ್ವಾಸ್ಥ್ಯ ಕಡೆಸಿದ್ದು ಕುಮಾರ ನಾಯಕ್ , ಸ್ಥಳೀಯರಲ್ಲದ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷ ಸಂಘಟನೆ ಮಾಡಿದ್ದ ಹಲವು ನಾಯಕರಿಗೆ ಮೋಸ ಮಾಡಿದ್ದು , ಅವರು ಚುನಾವಣೆ ಮುಗಿದ ನಂತರ ಬೆಂಗಳೂರು ಸೇರುವುದರಲ್ಲಿ ಅನುಮಾನವಿಲ್ಲ,
ಈ ಹಿಂದೆ ನಾನು ಕಲ್ಮಲಾ ಕ್ಷೇತ್ರದ ಶಾಸಕ ಹಾಗು ಸಚಿವನಾಗಿ ಈ ಕ್ಷೇತ್ರದಲ್ಲಿ ಹಲವು ಕಾರ್ಯಗಳನ್ನು ಕೈಗೊಂಡಿದ್ದು , ಕೆಲವು ದಿನಗಳ ಹಿಂದೆ ಮಟಮಾರಿಯ ಗ್ರಾಮವನ್ನು ಆದರ್ಶ ಸಂಸದ ಗ್ರಾಮಕ್ಕೆ ಸೇರಿಸುವ ಪ್ರಸ್ತಾವನೆ ಕಳಿಸಿದ್ದೆ ಅಲ್ಲದೇ ೭ ಕೋಟಿ ವೆಚ್ಚದಲ್ಲಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಮಾಡಿರುವೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ಭಾಗದ ಬೇಡಿಕೆಯಾದ ಸಂಪೂರ್ಣವಾದ ನೀರಾವರಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಕೊಟ್ಟ ಮಾತಿನಂತೆ ನಡೆಯುವೆ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ ನಮ್ಮ ಮೈತ್ರಿಯ ಭಾಗವಾಗಿರುವುದು ನಮಗೆ ಬಲ ತಂದಿದೆ ಎಂದರು.
ಮಾಜಿ ಶಾಸಕರಾದ ತಿಪ್ಪರಾಜು ಹವಲ್ದಾರ್ ಮಾತನಾಡಿ ಗ್ರಾಮೀಣ ಕ್ಷೇತ್ರ ನನ್ನ ಕರ್ಮಭೂಮಿ, ನಾನು ಸೋತರು, ಸತ್ತರೂ ಇಲ್ಲಿಯೇ ಯಾವುದೇ ಕಾರಣಕ್ಕೂ ಇಲ್ಲಿನ ಜನರು ನೀಡಿರುವ ಪ್ರೀತಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ,ನಾನು ಕೂಡ ಆಕಾಂಕ್ಷಿಯಾಗಿದ್ದೆ ಆದರೆ ಪಕ್ಷ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ದೇಶಕ್ಕೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಾವೆಲ್ಲರೂ ಪಣತೊಡೋಣ ಗ್ರಾಮೀಣ ಭಾಗದಲ್ಲಿ ಅತಿಹೆಚ್ಚಿನ ಲೀಡ್ ನೀಡುವ ಮೂಲಕ ಮತ್ತೊಮ್ಮೆ ಸಂಸದರಾದ ರಾಜಾಅಮರೇಶ್ವರ್ ನಾಯಕ್ ಅವರನ್ನು ಕಳಿಸೋಣ ಎಂದರು.
ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಮಾತನಾಡಿ, ಎಸ್.ಶಿವರಾಜ್ ಪಾಟೀಲರು ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ನಂತರ ಸರ್ಕಾರ ಬದಲಾಗುವುದರಲ್ಲಿ ಅನುಮಾನವೇ ಇಲ್ಲ , ಗ್ಯಾರೆಂಟಿಗಳಿಂದ ಇಂದು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ , ಕಾಂಗ್ರೆಸ್ ನವರದು ಸುಳ್ಳಿನ ಗ್ಯಾರೆಂಟಿ, ಅವರ ವ್ಯಾರೆಂಟಿಯೇ ಮುಗಿದಿರುವಾಗ ಯಾವ ಗ್ಯಾರೆಂಟಿಯನ್ನು ಕಾಂಗ್ರೆಸ್ ನೀಡಲು ಸಾಧ್ಯ, ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ರದ್ದು ಮಾಡಿದೆ, ಮದ್ಯಕ್ಕೆ ದರ ಏರಿಸಿ ಒಂದು ಕೈಯಿಂದ ಕಿತ್ತುಕೊಂಡು ಗ್ಯಾರಂಟಿಗಳ ಮೂಲಕ ಕೊಡುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ .
ಬಿಜೆಪಿ – ಜೆಡಿಎಸ್ ನ ಸಂಬಂಧ ನೋಡಿ ಸಚಿವರಾದ ರಾಜಣ್ಣನವರು ದೇವೇಗೌಡರ ಕುರಿತಂತೆ ಸಲ್ಲದ ಹೇಳಿಕೆ ನೀಡುತ್ತಿರುವ ದರ್ಪದ ಪರಮಾವಧಿಯಾಗಿದೆ. ಈಗಾಗಿ ಕಾಂಗ್ರೆಸ್ ನವರಿಗೆ ಬುದ್ಧಿ ಕಲಿಸಲು ಅವರಿಗೆ ಬುದ್ಧಿ ಕಲಿಸಲು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗಳಿಸಲು ಕಾರ್ಯಕರ್ತರೆಲ್ಲರೂ ಪ್ರತಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಟ್ಟಿಸಬೇಕೆಂದರು.
ಈ ಜೆಡಿಎಸ್ ಜಿಲ್ಲಾಧ್ಯಕ್ಷ ವಿರುಪಾಕ್ಷಿ , ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್, ಗಂಗಾಧರ್ ನಾಯಕ್ , ಲೋಕಸಭೆಯ ಉಸ್ತುವಾರಿಗಳಾದ ಶಿವಶಂಕರ್ ವಕೀಲರು, ರವೀಂದ್ರ ಜಲ್ದಾರ್ , ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ , ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗೂರು, ಮಹಿಪಾಲರೆಡ್ಡಿ ಗುಂಜಳ್ಳಿ, ಮಹಾಂತೇಶ್ ಮುಕ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು