ಸುಳ್ಳು ಆರೋಪ ನಿಲ್ಲಿಸಿ: ಡಾ. ಅವಿನಾಶ ಜಾಧವ

ಚಿಂಚೋಳಿ ನ 7: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ, ನೀರು ಸರಬರಾಜು ವ್ಯವಸ್ಥೆ ಕಾಮಗಾರಿಯು ಪೂರ್ಣಗೊಳ್ಳದೆ ಪುರಸಭೆಗೆ ಹಸ್ತಾಂತರ ಮಾಡಿಕೊಂಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಶಾಸಕ ಡಾ.ಅವಿನಾಶ ಜಾಧವರವರು ಸ್ವಷ್ಟನೆ ನೀಡಿದ್ದಾರೆ.
ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಈ ಯೋಜನೆ ತಂದಿದ್ದೇನೆ. ಆದರೆ ಅಧಿಕಾರಿಗಳು ಯಾರೆ ಆಗಲಿ ಗುಣಮಟ್ಟದ ಕಾಮಗಾರಿ ನಡೆಸಲು ಆದೇಶ ಮಾಡಿದ್ದೇನೆ.ಕಳಪೆ ಕಾಮಗಾರಿ ಮತ್ತು ಅಪೂರ್ಣ ಕಾಮಗಾರಿ ಬಗ್ಗೆ ಈಗಾಗಲೇ ತನಿಖೆ ನಡೆಸಿ ವರದಿ ಸಿದ್ದಪಡಿಸಿ ಎಂದು ಉನ್ನತಮಟ್ಟ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಯಾವ ಅಧಿಕಾರಿಗಳು ತಪ್ಪು ವರದಿ ನೀಡಿದ್ದಾರೆಯೋ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ನನ್ನ ಮತಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಅಷ್ಟೆ ನನ್ನ ಗುರಿ ಎಂದು ಹೇಳಿದರು.
ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ನಿಲ್ಲಿಸಿ ನಾನು ಯಾವುದೇ ಕಳಪೆಮಟ್ಟದ ಕಾಮಗಾರಿಯಲ್ಲಿ ಭಾಗಿ ಇಲ್ಲ. ಯಾವುದೇ ಕಳಪೆಮಟ್ಟದ ಕಾಮಗಾರಿ ಇದ್ದರೆ ಗಮನಕ್ಕೆತನ್ನಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.