ಸುಳ್ಳು ಅಟ್ರಾಸಿಟಿ ಕೇಸುಗಳನ್ನು ಹಾಕಿಸುವ ಪಕ್ಷಗಳಿಗೆ ಮತ ನೀಡಬೇಡಿ

ಕೋಲಾರ,ಏ,೨೯-ನಾನು ೧೦ ವರ್ಷ ಕಾಲ ಶಾಸಕನಾಗಿದ್ದ ವೇಳೆ ಬೆಗ್ಲಿಹೊಸಹಳ್ಳಿ ಗ್ರಾ.ಪಂ ಹೆಚ್ಚಿನ ಅನುದಾನವನ್ನು ಕೊಟ್ಟು ಅಭಿವೃದ್ಧಿಪಡಿಸಿದ್ದೇನೆ, ಕುಡಿಯುವ ನೀರಿಗೆ ಕೊಳವೆಬಾವಿ ಶುದ್ಧ ನೀರಿನ ಘಟಕ ಸಿಸಿ ರಸ್ತೆಗಳು ವಿದ್ಯುತ್ ದೀಪಗಳು, ಹಲವಾರು ಪುರಾತನ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಹೇಳಿದರು.
ತಾಲೂಕಿನ ಬೆಗ್ಲಿಹೊಸಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ಮತಯಾಚನೆ ಮಾಡಿದ ನಂತರ ಮಾತನಾಡಿ, ಬೆಗ್ಲಿಹೊಸಹಳ್ಳಿ ಗ್ರಾಮಕ್ಕೆ ಹಲವಾರು ಯೋಜನೆಗಳನ್ನು ತಂದು ಈ ಗ್ರಾಮವನ್ನು ಅಭಿವೃದ್ಧಿಪಡಿಸಿದ್ದೇನೆ. ಆದರೆ ಯಾರ ಒಬ್ಬ ಕಿಡಿಗೇಡಿ ಮಾತು ಕೇಳಿ ಈ ಗ್ರಾಮದಲ್ಲಿ ಒಬ್ಬರು ನನ್ನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಅಭಿವೃದ್ಧಿಪಡುಸುತ್ತಿರುವ ನನ್ನ ಮೇಲೆ ಈ ರೀತಿ ಸುಳ್ಳು ಕೇಸುಗಳನ್ನು ಹಾಕಿಸುವ ಪಕ್ಷಗಳಿಗೆ ಮತ ನೀಡಬೇಡಿ ಎಂದು ತಿಳಿಸಿದರು.
ನನ್ನ ಗುರಿ ಕೋಲಾರವನ್ನ ಅಭಿವೃದ್ಧಿಪಡಿಸುವುದು. ವೇಮಗಲ್ ನರಸಾಪುರ ಹೋಬಳಿಗಳಲ್ಲಿ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಯುವಕ ಯುವತಿಯರಿಗೆ ಇಂದು ಉದ್ಯೋಗ ಸಿಗುತ್ತಿದೆ, ಅದೇ ರೀತಿ ಬೆಗ್ಲಿ ಹೊಸಳ್ಳಿ ಗ್ರಾಪಂ ನನ್ನ ಗ್ರಾಮಗಳಲ್ಲಿ ನಿರುದ್ಯೋಗ ಯುವಕ ಯುವತಿಯರು ಇದ್ದಾರೆ, ಅವರಿಗೆ ಪರ್ಮನೆಂಟ್ ಜಾಬ್ ಕೊಡಿಸುವ ಜವಾಬ್ದಾರಿ ನನ್ನದು. ನಿರುದ್ಯೋಗ ಮತ್ತು ಬಡತನ ನಿರ್ಮೂಲನೆ ಆಗಬೇಕು, ಅದಕ್ಕಾಗಿ ಬಿಜೆಪಿ ಪಕ್ಷಕ್ಕೆ ಭಾರತೀಯ ಜನತಾ ಪಕ್ಷ ಸೇರಿದ್ದೇನೆ ಎಂದರು.
ಶಾಸಕನಾಗಲು ೧೨ ದಿನ ಬಾಕಿ-
ಬಡತನ ಮತ್ತು ನಿರುದ್ಯೋಗ ವನ್ನು ಹೋಗಲಾಡಿಸುತ್ತೇವೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶ ಮೆರೆಯುತ್ತಿದೆ ಕಾರಣ ನರೇಂದ್ರ ಮೋದಿಜಿಯವರು ನಾನು ಇನ್ನು ೧೨ ದಿನಕ್ಕೆ ನಾನು ಶಾಸಕನಾಗುತ್ತೇನೆ ಇದರಲ್ಲಿ ಯಾವುದೇ ರೀತಿಯ ಸಂಶಯ ಬೇಡ ಎಂದು ತಿಳಿಸಿದರು.
ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿ, ನಮ್ಮ ಗ್ರಾಮಕ್ಕೆ ಮತ್ತು ನಮ್ಮ ಗ್ರಾಪಂ ಎಲ್ಲಾ ಹಳ್ಳಿಗಳಿಗೂ ನಾನು ಕೇಳಿದಷ್ಟು ಅನುದಾನ ವರ್ತೂರು ಪ್ರಕಾಶ್ ನೀಡಿದ್ದಾರೆ ಅವರ ಋಣ ತೀರಿಸುವ ಸಂದರ್ಭ ಈಗ ನಮಗೆ ಬಂದಿದೆ. ನಾವು ನೀವು ಎಲ್ಲರೂ ಸೇರಿಕೊಂಡು ಅವರನ್ನು ಕೋಲಾರದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಕಳಿಸಿಕೊಡುವ ಕೆಲಸ ಮಾಡಬೇಕಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸದಸ್ಯರಾದ ರೂಪಶ್ರೀ ಮಂಜುನಾಥ್, ಅರುಣ್ ಪ್ರಸಾದ್, ಬೆಗ್ಲಿಹೊಸಳ್ಳಿ ಗ್ರಾಪಂ ಅಧ್ಯಕ್ಷ ಗಂಗರಾಜ್, ಉಪಾಧಕ್ಷೆ ಭಾಗ್ಯಮ್ಮ ಶ್ರೀನಿವಾಸ್, ಮುಖಂಡರಾದ ಡೇರಿ ನಾರಾಯಣಸ್ವಾಮಿ, ಪಾರ್ವತಮ್ಮ ಮುನಿಸ್ವಾಮಿ, ವರಲಕ್ಷ್ಮಿ ಸೋಮಶೇಖರ್, ಚರಣ್ ಇದ್ದರು.