ಸುಳ್ಳುಗಳ ಸರದಾರರು ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ, ತಾಲೂಕಿನಲ್ಲಿ ಶಾಸಕ : ಕೆಪಿಸಿಸಿ ಉಪಾಧ್ಯಕ್ಷ ಡಾ.ಶರಣಪ್ರಕಾಶ್ ಪಾಟೀಲ್ ಟೀಕೆ

ಸೇಡಂ,ಆ,01: ಕೇಂದ್ರ ಬಿಜೆಪಿ ಸರ್ಕಾರವು ಸರ್ಕಾರ ಬರುವುದಕ್ಕಿಂತ ಮುಂಚಿತವಾಗಿ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರತಿಯೊಬ್ಬ ವ್ಯಕ್ತಿಗೆ 15 ಲಕ್ಷ ರುಪಾಯಿ ಅವರ ಖಾತೆಗೆ ಹಾಕುತ್ತೇನೆಂದು ಜೀರೋ ಅಕೌಂಟ್ ತೆಗೆಸಿ ಜಮಣೆಗೆ 500 ಇಟ್ಟಿದ್ದು ತೆಗೆದುಕೊಂಡವರು ಪ್ರಧಾನಿ ನರೇಂದ್ರ ಮೋದಿ ಯಾದರೆ , ಬಿಜೆಪಿ ಸರ್ಕಾರ ಪ್ರಣಾಳಿಕೆಯಂತೆ ಯಡಿಯೂರಪ್ಪನವರು ರೈತರ ಸಾಲ ಮನ್ನ ಮಾಡುತ್ತೇನೆಂದು ಹೇಳಿದರು ಇನ್ನುವವರೆಗೂ ಒಬ್ಬ ರೈತನ ಸಾಲ ಮನ್ನ ಮಾಡಿಲ್ಲ, ತಾಲೂಕಿನಲ್ಲಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಪ್ರನಾಳಿಕದಲ್ಲಿ ಹೇಳಿದಂತೆ ಯುವಕರಿಗೆ ಉದ್ಯೋಗ ನೀಡುತ್ತೇನೆಂದು ಹೇಳಿದವರು ನಾಲ್ಕು ವರ್ಷ ಪೂರ್ಣಗೊಂಡರು ಇನ್ನುವರೆಗೂ ಒಂದು ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ ಸರಿಯಾಗಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರವು ಸುಳ್ಳುಗಳ ಸರದಾರರ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಊಡಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜುಲೈ 29ರಿಂದ ಯಾನಗುಂದಿಯ ಮಾಣಿಕ್ಯ ಗಿರಿಯಿಂದ ಸುಲಪೇಟ್ ಗ್ರಾಮದವರೆಗೆ ಸರ್ಕಾರದ ಸಾಧನೆ, ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನ ಪ್ರಚಾರ ಹಾಗೂ 75 ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಜನಜಾಗೃತಿ ಪಾದಯಾತ್ರೆಯ ನಾಲ್ಕನೇ ದಿನದ ಪೂರ್ಣಗೊಳಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಮುಧೋಳ ಬ್ಲಾಕ್ ಅಧ್ಯಕ್ಷ
ರವೀಂದ್ರ ನಂದಿಗಾಮ, ಪ್ರಮುಖರಾದ
ಬಸವರಾಜ ಪಾಟೀಲ್ ಊಡಗಿ,ಸತೀಶರೆಡ್ಡಿ ರಂಜೋಳ, ಮಹಾಂತಪ್ಪಸಂಗಾವಿ, ವಿಶ್ವನಾಥ ಪಾಟೀಲ್,ದಾಮೋಧರರೆಡ್ಡಿ, ಮಧುಸೂಧನರೆಡ್ಡಿಲಕ್ಷ್ಮೀಕಾಂತರಾವ್ ಕುಲಕರ್ಣಿ, ಜಗನ್ನಾಥ
ಚಿಂತಪಳ್ಳಿ, ಜೈಭೀಮ ಊಡಗಿ, ಸತೀಶ
ಪೂಜಾರಿ, ರಾಜು ಹಡಪದ್, ಪ್ರಕಾಶ್ ಊಡಗಿ ತಾಂಡ ಗುರುನಾಥರೆಡ್ಡಿ ಪಾಟೀಲ,
ಶ್ರೀನಿವಾಸರೆಡ್ಡಿ,ಹಣಮಂತರೆಡ್ಡಿ,ಮಲ್ಲಾಬಾದ,ಸದಾಶಿವರೆಡ್ಡಿ ಗೋಪೆನಪಲ್ಲಿ ಗೋವರ್ಧನರೆಡ್ಡಿ,ರಮೇಶ, ಬ್ಲಾಕ್ ಕಾಂಗ್ರೆಸ್ ಯುದ್ಧದ ಅಧ್ಯಕ್ಷ ಭೀಮಶಂಕರ್ ಕೊಳ್ಳಿ, ಯೂಥ್ ಉಪಾಧ್ಯಕ್ಷ ಸತ್ತರ್ ನಾಡೇಪಲ್ಲಿ ಹಾಜಿ ನಾಡೇಪಲ್ಲಿ, ರಾಹುಲ್ ಊಡುಗಿ, ಹೇಮಲಾ ನಾಯಕ್, ಮುರಳಿ ಕೊಂತನಪಲ್ಲಿ
ರಾಮು ನಾಯಕ್,ಮಾರುತಿ ಕೊಡಂಗಲ್ಕರ್, ವಿಲಾಸ್ ಗೌತಮ್,
ಯುನೂಸ್ ಸವೇರಾ, ನರಸಪ್ಪ ರಾಜೋಳ, ಶ್ರೀನಿವಾಸ ಪ್ಯಾಟಿ, ಅಶೋಕ
ಪಿರಂಗಿ, ಪ್ರಶಾಂತ ಸೇಡಂಕರ್, ಮಾರುತಿ
ಮುಗುಟಿ, ಸತ್ತಾರ ನಾಡೇಪಲ್ಲಿ ಚಂದ್ರಪ್ಪ

ಈರಾಪಲ್ಲಿ, ನರಸಪ್ಪ ಸೇರಿದಂತೆ ಅನೇಕರಿದ್ದರು.

ಹೇಮಲ ನಾಯಕ್ ನೇತೃತ್ವದಲ್ಲಿ ಬಂಜಾರ ಸಮಾಜದ ಎರಡು ನೂರಕ್ಕೂ ಹೆಚ್ಚು ಮಹಿಳೆಯರು ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಳಿಸುವುದರ ಜೊತೆಗೆ ಗ್ರಾಮಕ್ಕೆ ಬಂದ ಮಾಜಿ ಸಚಿವ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ ಶರಣಪ್ರಕಾಶ್ ಪಾಟೀಲ್ ಊಡಗಿ ಅವರಿಗೆ ಸನ್ಮಾನಿಸಿ ಸ್ವಾಗತಿಸಿ ಮಹಿಳಾ ಕಾರ್ಯಕರ್ತರು.


ನಾಲ್ಕನೇ ದಿನದ ಉತ್ಸಾಹ ಇಮ್ಮಡಿಯಾಗಿದೆ. ಪ್ರತಿ ಹೆಜ್ಜೆಯಲ್ಲೂ ಜಾಗೃತಿ ಕಿಚ್ಚು ರಣರಣಿಸಿದೆ. ದಾರಿ ಸಾಗುತ್ತಿರುವುದು ತಿಳಿಯುತ್ತಿಲ್ಲ, ಹರ್ಷ ಮುಟ್ಟಿದ ಆ ಸಂಗ್ರಾಮದ ಮುಂದೆ ನಮ್ಮದೆಲ್ಲ ಸಣ್ಣ ಪ್ರಮಾಣದ ಮಾತ್ರ ಶ್ರಮ. ಅಮೃತಮಹೋತ್ಸವದ ಆ ದಿನದ ನಿರೀಕ್ಷೆಯಲ್ಲಿ ಸಾಗುತ್ತಿದೆ ಜನ ಜಾಗೃತಿ ನಡಿಗೆ.
ರಾಘು ವಾಲಿಕರ್ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಬೀರನಹಳ್ಳಿ.