ಸುಳ್ಳಿನ ಅರಮನೆ ಕಟ್ಟುತ್ತಿದೆ ಕೇಂದ್ರ ಸರ್ಕಾರ: ಬಸವರಾಜ

ದೇವದುರ್ಗ.ನ.೨೫-ಏಳು ವರ್ಷಗಳ ಹಿಂದೆ ದೇಶದ ಜನತೆಗೆ ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ ಎಂದು ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ ವಾಗ್ದಾಳಿ ನಡೆಸಿದರು.
ತಾಲೂಕಿನ ಜಾಲಹಳ್ಳಿಯಲ್ಲಿ ಸಿಪಿಐಎಂನಿಂದ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾ ಮಟ್ಟದ ೧೩ನೇ ಸಮ್ಮೇಳನ ಉದ್ಘಾಟಿಸಿ ಬುಧವಾರ ಮಾತನಾಡಿದರು. ದೇಶದ ಜನತೆರು ಪ್ರತಿವರ್ಷ ೩೫ಲಕ್ಷ ಕೋಟಿಯಂತೆ ೭ ವರ್ಷಗಳಲ್ಲಿ ಸುಮಾರು ೨೫೦ಲಕ್ಷ ಕೋಟಿ ತೆರಿಗೆ ಪಾವತಿಸಿದ್ದಾರೆ. ಜನತೆಗೆ ಅನುಕೂಲವಾಗುವಂಥ ಯಾವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ಬಡವರಿಗೆ ವಸತಿ, ಮಹಿಳೆರಿಗೆ ರಕ್ಷಣೆ ನೀಡುವುದಾಗಿ ಹೇಳಿ ಮೈಮರೆತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಪಂಚದಲ್ಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ೧೦೭ದೇಶಗಳಲ್ಲಿ ಭಾರತಕ್ಕೆ ೧೦೧ಸ್ಥಾನವಿದೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ ೧೨ಜನ ಹಸಿವುನಿಂದ ಹಸುನೀಗುತ್ತಿದ್ದಾರೆ. ದೇಶದ ಜನರು ಖರೀದಿ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಈಗಾಗಿಲೆ ಸುಮಾರು ೧೮ಲಕ್ಷ ಕೈಗಾರಿಕೆಗಳು ಮುಚ್ಚಿವೆ. ಅದರಲ್ಲಿ ದುಡಿಯುತ್ತಿರುವ ಜನ ಬೀದಿಗೆ ಬಂದಿದ್ದಾರೆ.
ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಾಮಾನ್ಯ ಜನರಿಗೆ ತಿಳಿಹೇಳಬೇಕಿದೆ. ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಅವುಗಳಿಂದ ಜನರ ಕಾಳಜಿ ಅಸಾಧ್ಯ. ಹಣ, ಶ್ರೀಮಂತಿಕೆ ಇದ್ದವರಿಗೆ ಪಕ್ಷದ ಟಿಕೆಟ್ ನೀಡುತ್ತವೆ. ನಮ್ಮಂಥ ಪಕ್ಷದಲ್ಲಿ ಮಾತ್ರ ಬಡವರು, ಹೋರಾಟಗಾರರಿಗೆ ಅವಕಾಶವಿದೆ. ಕಾರ್ಯಕರ್ತರು ಈ ಬಗ್ಗೆ ಜನರಿಗೆ ಅರಿವು ಮೂಡಿಸಿ ಪಕ್ಷ ಬಲಪಡಿಸಬೇಕು ಎಂದರು.
ಇದಕ್ಕೂ ಮುನ್ನ ನಿಜಶರಣ ಅಂಬಿಗೇರ ಚೌಡಯ್ಯ ಭವನದಿಂದ ರಂಗನಾಥ ಸ್ವಾಮಿ ಮೈದಾನದವರೆಗೆ ಮೆರವಣಿ ನಡೆಯಿತು. ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ನಿತ್ಯಾನಂದಸ್ವಾಮಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಜಿ.ವೀರೇಶ, ಎಚ್.ಪದ್ಮಾ, ಶೇಕ್ಷಾಖಾದ್ರಿ, ಶರಣಬಸವ, ಕರಿಯಪ್ಪ ಅಚ್ಚೋಳಿ, ಗಿರಿಯಪ್ಪ ಪೂಜಾರಿ, ಶಬ್ಬೀರ್ ಅಹ್ಮದ್ ಇದ್ದರು.