ಸುಳ್ಳಿನಿಂದ ಪಡೆದ ಸ್ಥಾನ ಶಾಶ್ವತವಲ್ಲ:ಮುನ್ನೋಳಿ

ಕಲಬುರಗಿ.ಮಾ.07:ಸುಳ್ಳಿನಿಂದ ಪಡೆದ ಸ್ಥಾನ, ದರ್ಪದಿಂದ ಸಂಪಾದಿಸಿದ ಗೌರವ, ಮೋಸದಿಂದ ಗಳಿಸಿದ ಹಣ ಎಂದು ಶಾಶ್ವತವಲ್ಲ ನಾವು ಮಾಡಿದ ಒಳ್ಳೆಯ ಕಾರ್ಯವೆ ಶಾಶ್ವತವಾಗಿರುತ್ತದೆ ಎಂದು ಶಿಕ್ಷಕರಾದ ಮಲ್ಲಿನಾಥ ಮುನ್ನೋಳಿ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 148ನೇ ಶಿವಾನುಭವ ಗೋಷ್ಟಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಸಹನೆ ಇದ್ದರೆ ಸಮಯ ಕೂಡ ಸಹಕರಿಸುತ್ತದೆ, ತಾಳ್ಮೆಯನ್ನು ಮೈಗೂಡಿಸಿಕೊಂಡು ಮಾನವೀಯ ಮೌಲ್ಯಗಳೊಂದಿಗೆ ಸಮೃದ್ಧ ಸಮಾಜ ಕಟ್ಟಬೇಕು. ತಮ್ಮ ಜೀವನವನ್ನು ತ್ಯಾಗ ಮಾಡಿ ರಾಷ್ಟ್ರಕ್ಕೆ ಅರ್ಪಣೆ ಮಾಡಿದ ರಾಷ್ಟ್ರ ಭಕ್ತರು ನಮ್ಮ ಆದರ್ಶ ವ್ಯಕ್ತಿಗಳಾಗಬೇಕು. ಬಿದ್ದಾಗ ನೋಡಿ ನಗುವ ನೂರು ಸಂಬಂಧಿಕರಿಗಿಂತ, ಕೈ ಹಿಡಿದು ಮೇಲೆ ಎತ್ತುವ ಒಬ್ಬ ಹೃದಯವಂತನೇ ಶ್ರೇಷ್ಠ. ಕಲ್ಯಾಣ ಕರ್ನಾಟಕ ಭಾಗದಲ್ಲಿದಲ್ಲಿರುವ ಹಲವಾರು ಪ್ರತಿಭೆಗಳಿಗೆ
ಶ್ರೀ ಮಠವು ಪ್ರತಿವಾರವೇದಿಕೆ ಕೊಡುವುದರೊಂದಿಗೆ ಈ ಭಾಗದ ಕವಿ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮಾರ್ಮಿಕವಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯರಾಜಕುಮಾರ ಬಿರಬಿಟ್ಟೆ ಆಗಮಿಸಿದರು.
ಕುಮಾರಿ ಛಾಯಾ, ಪೂಜಾ ಪ್ರಾರ್ಥಿಸಿದರು.ಮಾಣಿಕ್ ಮಿರ್ಕಲ್ ಸ್ವಾಗತಿಸಿದರು. ಸಂಗಮೇಶ ನಾಗೂರ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಶರಣು ಮಾಲಿ ಪಾಟೀಲ, ಸಿದ್ದಣ ವಾಡಿ, ಗುರುರಾಜ ಹಸರಗುಂಡಗಿ,
ಮಾಣಿಕ ಗುತ್ತೇದಾರ, ಬಸವರಾಜ ಮಗಲಿ,ಶರಣಬಸಪ್ಪ ಕಲ ಹಿಪ್ಪರಗಿ, ಮಲ್ಲಿನಾಥ ಗುತ್ತೇದಾರ, ಶಾಂತಲಿಂಗ ಕಲಬುರಗಿ,ದಯಾನಂದ ಹೇಮಾಜಿ,ಮಲ್ಲಿಕಾರ್ಜುನ ಬೋರಂಪಳ್ಳಿ, ಜಗನ್ನಾಥ ಸಜ್ಜನ ಸೇರಿದಂತೆ ಹಲವಾರು ಜನ ಭಾಗವಹಿಸಿದರು.