ಸುಳ್ಳದಲ್ಲಿ 43ನೇ ರೈತರ ದಿನ ಆಚರಣೆ

ಹುಬ್ಬಳ್ಳಿ,ಜು.21: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ಸುಳ್ಳ ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ 43 ನೇ ರೈತ ಹುತಾತ್ಮ ದಿನವನ್ನು ಆಚರಣೆ ಮಾಡಲಾಯಿತು.
ಈ ವೇಳೆ ರೈತ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ರೈತರ ಸಮಸ್ಯೆಗಳು ಸಮಸ್ಯೆಯಾಗಿಯೆ ಉಳಿದಿದ್ದು, ಸರ್ಕಾರದಿಂದ ರೈತರಿಗೆ ಸ್ಪಂದನೆ ದೊರೆತಿಲ್ಲ ಎಂದು ಕಿಡಿಕಾರಿದರು.
ಕೂಡಲೇ ಸರ್ಕಾರ ಎಮ್.ಎಸ್.ಪಿಯನ್ನು ಕಾನೂನಾತ್ಮಕವಾಗಿ ಜಾರಿಗೆ ತರಬೇಕು. 2020 ರ ಭೂ ಸ್ವಾದೀನ ಕಾಯಿದೆ, ಭೂ ಸುಧಾರಣ ಕಾಯಿದೆ ಸೇರಿದಂತೆ ಎಪಿಎಂಸಿ ಕಾಯಿದೆಯನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಲ್ಮೇಶ್ವರ ಪ್ರಗತಿಪರ ರೈತರ ಸಂಘದ ಅಧ್ಯಕ್ಷರಾದ ಮುದಕಣ್ಣ ಕಂಕೊಳ್ಳಿ,ಉಪಾಧ್ಯಕ್ಷರಾದ ಮಂಜುನಾಥ ಕಟ್ಟಿ,ಮಹಿಳಾ ಉಪಾಧ್ಯಕ್ಷರಾದ ಸವಿತಾ ಪಾಟೀಲ,ಸಿದ್ರಾಮಪ್ಪ ನಾಗರಳ್ಳಿ,ಸಿದ್ರಾಮಯ್ಯ ಶಿವಳ್ಳಿಮಠ,ಬಸವರಾಜ ಗುಮ್ಮಗೊಳ,ಬಸ್ಸಯ್ಯ ಹಿರೇಮಠ,ಶಿವಕಲ್ಲಪ್ಪ ಕಲ್ಯಾಣಿ, ಪ್ರಭಯ್ಯ ಅರಲಿಮತ್ತಿಮಠ ನಾಗಪ್ಪ ಬೇಳವಾಟಗಿ,ಕಲ್ಮೇಶ ದೇಮಕ್ಕನವರ,ಮುದಕಪ್ಪ ನವಲಿ,ಮಂಜು ಮಾದರ,ಶಿವಾಜಿ ತುಳಜಮ್ಮನವರ,ಅಕ್ಕವ್ವ ಶೀವಳ್ಳೀಮಠ,ನಿಂಗಪ್ಪ ಕೋಳಿ,ಮಡಿವಾಳಪ್ಪ ಕಂಕೊಳ್ಳಿ,ಅಶೋಕ್ ಪೂಜಾರ,ಬಸು ಕನ್ನೊಳ್ಳಿ, ಗಂಗು ಪಾತರ,ಗಂಗಾಧರ ಗೌರಿ,ಗೀತಾ ಗುಮ್ಮಾಗೊಳ,ವಿರೂಪಾಕ್ಷಿ ಕೆರಿಮನಿ,ಮಹೇಶ ಮತ್ತಿಹಳ್ಳಿ,ಸಿದ್ರಾಮಪ್ಪ ಮಾರಡಗಿ,ಸಿದ್ರಾಮ ಕಂಬಾರ,ಶಿವು ಮಾಳಗಿ, ನಾಗು ಬೇಳವಟಗಿ,ರಮೇಶ ಮಲ್ಲಿಗವಾಡ,ಸಣ್ಣಕಲ್ಲಪ್ಪ ಕಂಕೊಳ್ಳಿ ಹಾಗೂ ಯುವಕರು ಮಹಿಳೆಯರು ಊರಿನ ಗುರು ಹಿರಿಯರು ಉಪಸ್ಥಿತರಿದ್ದರು.