ಸುಳ್ಯ ಶಾರದಾ ಕಾಲೇಜಿನಲ್ಲಿ ರೆಡ್ ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕದ ಉದ್ಘಾಟನೆ

ಸುಳ್ಯ, ಮಾ.೧೯- ಸುಳ್ಯದ ಶ್ರೀ ಶಾರದ ಮಹಿಳಾ ಕಾಲೇಜಿನ ವತಿಯಿಂದ ರೆಡ್ ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕದ ಉದ್ಘಾಟನೆ ನಡೆಯಿತು.
ಶಾರದಾ ಪ.ಪೂ. ಕಾಲೇಜಿನ ಪ್ರಿನ್ಸಿಪಾಲ್ ದಯಾಮಣಿ ಕೆ. ಘಟಕಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲ್ ಜ್ಯೋತ್ಸ್ನಾ. ಕೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಿಜಯ ಹಾಗೂ ರೆಡ್ ಕ್ರಾಸ್ ಘಟಕದ ನಾಯಕಿ ಕು.ದಿಶಾಲಿ, ಎನ್.ಎಸ್.ಎಸ್ ಘಟಕದ ನಾಯಕಿ ಕು. ರಕ್ಷಿತಾ ಕೆ.ಆರ್. ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಸಂಧ್ಯಾ ಕೆ ಸ್ವಾಗತಿಸಿ, ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಕು. ಮಂಜುಶ್ರೀ ಸಿ.ವಿ. ವಂದಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಕು. ಜೀವಿತಾ ಕಾರ್ಯಕ್ರಮ ನಿರೂಪಿಸಿದರು.