ಸುಳ್ಯ ರೇಂಜ್: ತನ್ ಶೀತ್ ವಿಶೇಷ ಸಭೆ

ಸುಳ್ಯ, ಡಿ.೨೪- ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸಾ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ತನ್ ಶೀತ್ ೨೦೨೦ ರೇಂಜ್ ಮಟ್ಟದ ವಿಶೇಷ ಸಭೆಯು ಸುಳ್ಯ ಗ್ರಾಂಡ್ ಪರಿವಾರ್ ಹಾಲ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ರೇಂಜ್ ಮದ್ರಸಾ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್ ಸಂಪಾಜೆ ವಹಿಸಿದರು. ಅಬ್ದುರ್ರ‍ಝಾಕ್ ಮುಸ್ಲಿಯಾರ್ ಅಜ್ಜಾವರ ಖಿರಾಅತ್ ಪಠಿಸಿದರು. ಕಾರ್ಯಕ್ರಮವನ್ನು ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ತಾಜುದ್ದೀನ್ ರಹ್ಮಾನಿಯವರು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಪ್ರಾಸ್ತಾವಿಕ ಮಾತನಾಡಿದರು.
ಸಮಸ್ತ ವಿದ್ಯಾಭ್ಯಾಸ ಮಂಡಳಿ ಮುಫತ್ತಿಷರಾದ ಬಹು: ಖಾಸಿಂ ಮುಸ್ಲಿಯಾರ್ ವಿಷಯ ಮಂಡಿಸಿದರು. ಎಸ್. ಎಂ. ಎಫ್. ಸುಳ್ಯ ವಲಯ ಅಧ್ಯಕ್ಷ ಕತ್ತರ್ ಇಬ್ರಾಹೀಂ ಹಾಜಿ ಶುಭ ಹಾರೈಸಿದರು. ಎಸ್.ಎಂ.ಎಸ್ ಸುಳ್ಯ ಅಧ್ಯಕ್ಷ ಹಮೀದ್ ಹಾಜಿ ಸುಳ್ಯ, ರೇಂಜ್ ಕೋಶಾಧಿಕಾರಿ ಹಸೈನಾರ್ ಹಾಜಿ ಧರ್ಮತ್ತಣ್ಣಿ ಸಹಿತ ಹಲವು ನೇತಾರರು ಉಪಸ್ಥಿತರಿದ್ದರು. ತಾಜುದ್ದೀನ್ ರಹ್ಮಾನಿಯವರ ಪ್ರಾರ್ಥಿಸಿದರು. ಶಮೀಂ ಅರ್ಶದಿ ಸ್ವಾಗತಿಸಿ, ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಬಶೀರ್ ಯು. ಪಿ. ಬೆಳ್ಳಾರೆ ವಂದಿಸಿದರು.