ಸುಳ್ಯ ನಗರ ವ್ಯಾಪ್ತಿಯಲ್ಲಿ ಶಿಕ್ಷಣ ವಂಚಿತ ಮಕ್ಕಳ ಸಮೀಕ್ಷೆ

ಸುಳ್ಯ:ಸುಳ್ಯ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಉಚ್ಛ ನ್ಯಾಯಾಲಯದ ಆದೇಶದಂತೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಹಾಜರಾಗಲು ಮತ್ತು ಶಾಲಾ ಮುಖ್ಯವಾಹಿನಿಗೆ ತರಲು ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ.
ನಗರ ಪಂಚಾಯತಿ ಕಛೇರಿಯ ಸಿಬ್ಬಂದಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆ ಸಮೀಕ್ಷೆಗೆ ತಮ್ಮ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಲು ನಗರ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ನಗರ ಪಂಚಾಯತ್ ಸಿಬ್ಬಂದಿಗಳಾದ ಶಶಿಕಲಾ ಮಯ್ಯ, ಕಮಲಾಕ್ಷ, ದಿಲೀಪ್, ಶ್ರವಣ್ ಕುಮಾರ್, ಶ್ರೀಜೆಶ್ ಇವರ ಜೊತೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಸಂದೇಶ್ ಎಸ್, ಧನುಷ್ ಕಮಾರ್,ಪ್ರೀತಿ.ಎ, ಸುಜನ್ಯ ಪಿ.ಸಿ,ಅಶ್ವಿತಾ ಬಿ ಆರ್,ನಿಶಾ ಪಿ,ಶಾಲಿನಿ ಪಿ ಆರ್, ಅಶ್ವಿತಾ ಕೆ ಸಿ,ಶ್ರೀನಿಧಿ ಕೆ ಎಸ್, ನಿಷ್ಮಾ, ರಶ್ಮಿ, ಮೇಘಾ, ಹೇಮಂತ್, ಕುಲದೀಪ್ ಸಮೀಕ್ಷೆ ತಂಡದಲ್ಲಿದ್ದಾರೆ.