ಸುಳ್ಯ ನಗರದಲ್ಲಿ ಸಹಾಯ್ ತಂಡದಿಂದ ಸ್ಯಾನಿಟೈಸೇಷನ್

ಸುಳ್ಯ, ಜೂ.೯- ಎಸ್‌ಎಸ್‌ಎಫ್, ಎಸ್‌ವೈಎಸ್, ಕೆಎಂಜೆ, ಕೆಸಿಎಫ್ ಮತ್ತಿತರ ಸಂಘಟನೆಗಳು ಸಂಯುಕ್ತವಾಗಿ ರೂಪಿಸಿದ ಸಹಾಯ್ ತಂಡದ ವತಿಯಿಂದ ಸುಳ್ಯ ನಗರದಲ್ಲಿ ಮಂಗಳವಾರ ಸ್ಯಾನಿಟೈಸೇಷನ್ ಮಾಡಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ವಿವಿಧ ಕಡೆಗಳಲ್ಲಿ ಸ್ಯಾನಿಟೈಸೇಷನ್ ನಡೆಸಲಾಯಿತು. ಅಂಗಡಿ ಮುಂಗಟ್ಟುಗಳ ಮುಂಬಭಾಗ, ಸರಕಾರಿ ಕಚೇರಿ, ಪುರಭವನ, ಆಸ್ಪತ್ರೆ ಪರಿಸರ ಸೇರಿದಂತೆ ಸಾರ್ವಜನಿಕರು ಸೇರುವ ವಿವಿಧ ಕಡೆಗಳಲ್ಲಿ ಸ್ಯಾನಿಟೈಸ್ ಮಾಡಲಾಗುತಿದೆ. ಬೆಳ್ಳಾರೆ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿಯೂ ಸ್ಯಾನಿಟೈಸ್ ಮಾಡಲಾಗುವುದು. ಸೀಲ್ ಡೌನ್ ಆದ ಪ್ರದೇಶ, ಕೋವಿಡ್ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡಲಾಗುವುದು. ಅಲ್ಲದೆ ಸಹಾಯ್ ತಂಡವು ಕೋವಿಡ್ ಕಾಲದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ನಡೆಸಲಾಗುತಿದೆ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರ, ಕೋವಿಡ್ ಬಾದಿತರ ಚಿಕಿತ್ಸೆಗೆ ಸಹಾಯ ನೀಡುವುದು. ರೋಗಿಗಳನ್ನು ಆಸ್ಪತ್ರೆಗೆ ಸಾಗಾಟ ಮಾಡುವುದು. ಅಶಕ್ತರಿಗೆ ಕಿಟ್ ನೀಡುವುದು, ಕೋವಿಡ್ ಬಾದಿತರಾಗಿ ಮನೆಯಲ್ಲಿ ಇರುವವರಿಗೆ ಅಗತ್ಯ ವಸ್ತುಗಳ ಸರಬರಾಜು ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಸಹಾಯ್ ತಂಡ ಮಾಡುತಿದೆ. ತಂಡದಲ್ಲಿ ೩೫ ಮಂದಿ ಸಕ್ರೀಯರಾಗಿದ್ದಾರೆ ಎಂದು ಎಸ್‌ಎಸ್‌ಫ್ ಸುಳ್ಯ ಡಿವಿಷನ್ ಅಧ್ಯಕ್ಷ ಮಹಮ್ಮದ್ ಫೈಝಲ್ ಝುಹರಿ ಹೇಳುತ್ತಾರೆ. ಸಹಾಯ್ ತಂಡದ ಜಿಲ್ಲಾ ನಿರ್ದೇಶಕ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸಿದ್ದಿಕ್ ಕಟ್ಟೆಕಾರ್, ಶಮೀರ್ ಡಿ.ಎಚ್, ನೌಷಾದ್ ಕೆರೆ ಮೂಲೆ, ಝಕರಿಯಾ ಸಹದಿ, ಹಸೈನಾರ್ ಗುತ್ತಿಗಾರು, ಕೆಬೀರ್ ಗುರುಂಪು ಮತ್ತಿತರರು ತಂಡದಲ್ಲಿದ್ದರು.