ಸುಳ್ಯದ ವಿದ್ಯಾರ್ಥಿನಿ ಮನುಜ್ಞ ಯು.ಬಿ ರಾಜ್ಯಕ್ಕೆ ಪ್ರಥಮ

ಳ್ಯ, ನ.೧೮- ಕರುನಾಡು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚಿಂತಾಮಣಿ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆಯಲ್ಲಿ ೧ರಿಂದ ೫ನೇ ತರಗತಿ ವಿಭಾಗದಲ್ಲಿ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯ ೫ನೇ ತರಗತಿಯ ವಿದ್ಯಾರ್ಥಿನಿ ಮನುಜ್ಞ ಯು.ಬಿ.ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೂ ೬ ರಿಂದ ೧೦ನೇ ತರಗತಿ ವಿಭಾಗದಲ್ಲಿ ರೋಟರಿ ವಿದ್ಯಾಸಂಸ್ಥೆಯ ೮ನೇ ತರಗತಿಯ ವಿದ್ಯಾರ್ಥಿನಿ ಮನಸ್ವಿ ಯು. ಬಿ. ಇವರ ಚಿತ್ರ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಇವರು ಶ್ರೀ.ದೇವರಾಜ್ ಯು.ಬಿ., ಹಾಗೂ ಕೆವಿಜಿ ಆಯುರ್ವೇದ ಕಾಲೇಜಿನ ಶ್ರೀಮತಿ. ವೇದಾಮಣಿ ಯಂ.ಬಿ. ಅವರ ಸುಪುತ್ರಿಯರು.