ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಬೆಂಕಿ ಅವಘಡ-ತಪ್ಪಿದ ಭಾರೀ ಅನಾಹುತ

ಸುಳ್ಯ, ಎ.೧೭- ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಗಮಯೂರಿ ಕಲಾಶಾಲೆಯಲ್ಲಿ ಏ.೧೬ ರಂದು ಸಂಜೆ ಬೆಂಕಿ ಅವಘಡ ನಡೆದಿದ್ದು ,ಕೂದಲೆಳೆಯ ಅಂತರದಿಂದ ಭಾರೀ ಅವಘಡವೊಂದು ತಪ್ಪಿದೆ.

ರಂಗಮಯೂರಿ ಕಲಾ ಶಾಲೆಯಲ್ಲಿ ಇಂದು ಸಂಗೀತ ತರಗತಿ ನಡೆದಿದ್ದು, ಆರಂಭದಲ್ಲಿ ಸಂಗೀತ ಕಲಿಯುವ ವಿದ್ಯಾರ್ಥಿಗಳಿಂದ ಪೂಜೆ ನಡೆದಿತ್ತು.ಸಂಗೀತ ತರಗತಿ ನಡೆದ ನಂತರ ಅಲ್ಲಿ ಹಚ್ಚಿದ ದೀಪ ಆರುವುದಕ್ಕೆ ಮೊದಲೇ ಕಲಾ ಶಾಲೆಯ ಸಂಚಾಲಕ ವಿಜಯಕುಮಾರ ಮಯೂರಿಯವರು ಬೀಗ ಹಾಕಿ ತೆರಳಿದ್ದರು.

ಸಂಜೆ ಮಳೆ ಆರಂಭವಾಗುವುದಕ್ಕೆ ಮೊದಲೇ ಗಾಳಿ ಬೀಸತೊಡಗಿದ್ದು ಇದರಿಂದ ಹಚ್ಚಿದ ದೀಪದ ಹತ್ತಿರ ಹಾಕಿದ ಕರ್ಟನ್ ದೀಪದಲ್ಲಿರುವ ಬೆಂಕಿಗೆ ತಗುಲಿ ವೇದಿಕೆಯ ಹಾಗೂ ವೇದಿಕೆಯ ಹಿಂಬದಿ ಇರುವ ಕೆಲವು ಪರಿಕರಗಳು ಬೆಂಕಿಗೆ ತಾಗಿ ಸುಟ್ಟು ಕರಕಲಾಗಿವೆ. ಬೆಂಕಿ ಹಚ್ಚಿಕೊಂಡದ್ದನ್ನು ತಿಳಿದು ವಿಜಯಕುಮಾರ್ ಮಯೂರಿ ಯವರು ಆಗಮಿಸಿದರು.

ಅದೇ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಹಾಗೂ ಸುದ್ದಿ ಸಿಬ್ಬಂದಿಗಳು ಬೆಂಕಿ ನಂದಿಸಲು ಸಹಕಾರಿಯಾದರು.