ಸುಳ್ಯದ ಯೋಗೇನ ಚಿತ್ತಸ್ಯ ಯೋಗ ತಂಡದಿಂದ ಯೋಗ ಬೆಳಕು ವಿಶೇಷ ಕಾರ್ಯಕ್ರಮ

ಸುಳ್ಯ, ನ.೧೮- ಸುಳ್ಯ ಯೋಗೇನ ಚಿತ್ತಸ್ಯ ಯೋಗ ತಂಡದಿ೦ದ ದೀಪಾವಳಿ ಪ್ರಯುಕ್ತ ಯೋಗ ಬೆಳಕು ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಯಿತು.
ಕಾರ್ಯಕ್ರಮದಲ್ಲಿ ಯೋಗ ವಿದ್ಯಾರ್ಥಿಗಳಿಗೆ ಆಟೋಟ ಸ್ಫರ್ಧೆಗಳು, ಹವ್ಯಾಸಿ ಗಾಯಕರಾದ ಕೈಲಾಸ್ ಶೆಣೈ ಇವರಿಂದ ದೀಪಾವಳಿಯ ಬಗ್ಗೆ ಗಾಯನ, ಶ್ರೀ ಮಂಜುನಾಥೇಶ್ವರ ಬೆಟ್ಟಂಪಾಡಿ ಭಜನಾ ತಂಡದಿಂದ ಕುಣಿತ ಭಜನೆ, ಯೋಗೇನ ಚಿತ್ತಸ್ಯ ತಂಡದ ಯೋಗ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಆನಂದ್ ಇಲೆಕ್ಟ್ರಿಕಲ್ಸ್ ಮಾಲಕ ಆನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮ ಕುತ್ಯಾಳ, ಕೃಷ್ಣ ವೇಣಿ ನಾವೂರು , ಸುಷ್ಮಾ ನಾವೂರು, ಶಾಲಿನಿ ಎಂ. ಕೊಡಿಯಾಲ ಬೈಲು ಮುಖ್ಯ ಅತಿಥಿಗಳಾಗಿದ್ದರು. ಯೋಗ ಗುರು ಸಂತೋಷ್ ಮುಂಡಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶರತ್ ಮರ್ಗಿಲಡ್ಕ ಸ್ವಾಗತಿಸಿ, ರಾಜೇಶ್ ಭಟ್ ವಂದಿಸಿದರು. ಮನ್ವಿತ್ ಕಾರ್ಯಕ್ರಮ ನಿರೂಪಿಸಿದರು.