ಸುಳ್ಯದ ಒಳಚರಂಡಿಯ ಮ್ಯಾನ್ ಹೋಲ್ ಬ್ಲಾಕ್ – ರಸ್ತೆಯಲ್ಲಿ ಹರಿದ ಕೊಳಚೆ ನೀರು

ಸುಳ್ಯ, ನ.೭- ಸುಳ್ಯ ಕಂದಾಯ ನಿರೀಕ್ಷಕರ ಕಛೇರಿಯ ಮುಂಭಾಗದಲ್ಲಿ ಒಳಚರಂಡಿಯ ಮ್ಯಾನ್ ಹೋಲ್‌ನಿಂದ ಕೊಳಚೆ ನೀರು ಬ್ಲಾಕ್ ಆಗಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಸೋರಿಕೆಯಾಗುತ್ತಿದ್ದನ್ನು ನಗರ ಪಂಚಾಯತ್ ಸರಿ ಮಾಡಿದ್ದು ಈಗ ಮತ್ತೆ ರಸ್ತೆಯಲ್ಲಿ ಕೊಳಚೆ ನೀರು ಹರಿಯಲಾರಂಭಿಸಿದೆ.

ಇದರಿಂದಾಗಿ ಸಾರ್ವಜನಿಕರು ನಡೆದಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಪಕ್ಕದಲ್ಲಿ ಇರುವ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ವಾಸನೆಯಲ್ಲಿ ಕಛೇರಿ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಹೆಚ್ಚೆತ್ತುಕೊಂಡು ಸರಿಪಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.