ಸುಳ್ಯದ ಉದ್ಯಮಿಯಿಂದ ಚಾಲಕರಿಗೆ, ಪೋಲಿಸ್, ಗೃಹರಕ್ಷಕ ದಳದ ನೌಕರರಿಗೆ, ನಿರ್ಗತಿಕರಿಗೆ ಫುಡ್ ವಿತರಣೆ

ಸುಳ್ಯ, ಮೇ ೨೯- ಸುಳ್ಯದ ಕೆ.ಎಸ್. ಆರ್ ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಸನ್ನಿಧಿ ಟವರ್ಸ್ ಹಾಗೂ ವಿಖ್ಯಾತ್ ವೈನ್ಸ್ ಮಾಲಕ ಯುವ ಉದ್ಯಮಿ ವಿಖ್ಯಾತ್ ರೈ ಶುಕ್ರವಾರ ಬೆಳಗ್ಗಿನಿಂದ ಸುಳ್ಯದ ಮುಖ್ಯ ರಸ್ತೆಯ ಮೂಲಕ ಹಾದು ಹೋಗುವ ಬಸ್, ಲಾರಿ,ಅಂಬ್ಯುಲೆನ್ಸ್ ಮುಂತಾದ ಅಗತ್ಯ ಸಾಮಾಗ್ರಿಗಳ ಸಾಗಾಟದ ವಾಹನ ಚಾಲಕರಿಗೆ, ಫೋಲೀಸ್ ಇಲಾಖೆಯ, ಅಬಕಾರಿ ಇಲಾಖೆಯ ಸಿಬ್ಬಂದಿಯವರಿಗೆ, ಗೃಹರಕ್ಷಕ ದಳದವರಿಗೆ, ನಗರದಲ್ಲಿರುವ ನಿರ್ಗತಿಕರಿಗೆ ಆಹಾರದ ಪೊಟ್ಟಣ ವಿತರಿಸಿದರು.
ತಮ್ಮ ಹೋಟೇಲ್ ನಲ್ಲಿ ಚಿಕನ್ ಬಿರಿಯಾನಿ ಮತ್ತು ವೆಜ್ ಬಿರಿಯಾನಿ ತಯಾರಿಸಿ ಪ್ಯಾಕೆಟ್ ಮಾಡಿ ನೀಡಿದರು.ಲಾಕ್ ಡೌನ್ ಸಮಯದಲ್ಲಿ ಸುಮಾರು ೨೫೦ ಮಂದಿಗೆ ಆಹಾರದ ಪ್ಯಾಕೆಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.