ಸುಳ್ಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಸುಳ್ಯ, ನ.೧- ನಾಡ ಹಬ್ಬಗಳ ದಿನಾಚರಣೆ ಸಮಿತಿ ಇದರ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಯು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ತಾಲೂಕು ಪಂಚಾಯತಿ ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಾನ್ ಪುರುಷರ
ಆದರ್ಶಗಳು, ಅವರ ಸಾಮಾಜಿಕ ಕಳಕಳಿ ಈಗೀನ ಸಮಾಜದ ಜನರಿಗೆ ಮುಟ್ಟಿಸುವ ಅಗತ್ಯ ಇದೆ. ನಮ್ಮ ಶ್ರಮವನ್ನು ಸಮಾಜಕ್ಕೆ ಮೀಸಲಿಡುವ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಚಿದಾನಂದ ಯು.ಎಸ್. ಉಪನ್ಯಾಸಗೈದರು. ತಾ.ಪಂ
ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ತಹಶೀಲ್ದಾರ್ ಅನಂತಶಂಕರ್, ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್., ಬಿ.ಸಿ.ಎಂ. ವಿಸ್ತರಣಾಧಿಕಾರಿ ವಿಜಯ್, ತಾ.ಪಂ. ನ ರಾಜಲಕ್ಷ್ಮೀ, ಬಿ.ಇ.ಒ. ಇಲಾಖೆಯ ಚಂದ್ರಶೇಖರ ಮತ್ತಿತರರಿದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.