ಸುಳ್ಯದಲ್ಲಿ ಈದುಲ್ ಫಿತರ್ ಹಬ್ಬ ಸರಳ ರೀತಿಯಲ್ಲಿ ಆಚರಣೆ

ಮನೆ ಮನೆಗಳಲ್ಲಿ ಈದ್ ನಮಾಜ್ ನೆರವೇರಿಸಿದ ಮುಸ್ಲಿಂ ಬಾಂಧವರು

ಸುಳ್ಯ, ಮೇ.೧೪- ಕೊರೊನಾ ವೈರಸ್ ನಿಂದಾಗಿ ಜನಸಾಮಾನ್ಯರು ಅತಂತ್ರ ಪರಿಸ್ಥಿತಿಯಲ್ಲಿ ಸರ್ಕಾರದ ಕೊವಿಡ್ ನಿಯಂತ್ರಣ ನಿಯಮ ಪ್ರಕಾರ ಮಸೀದಿಗಳಲ್ಲಿ ನಮಾಜ್ ಪಾರ್ಥನೆ ಮತ್ತು ನಮಾಜ್ ಅವಕಾಶವಿಲ್ಲದ ಕಾರಣ ಮುಸ್ಲಿಂ ಸಮುದಾಯ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಸುಳ್ಯ ತಾಲೂಕಿನಾದ್ಯಂತ ಗುರುವಾರ ಕುಟುಂಬ ಸದಸ್ಯರೆಲ್ಲರೂ ಅವರವರ ಮನೆ ಮನೆಗಳಲ್ಲಿ ಈದ್ ನಮಾಜ್ ನೊಂದಿಗೆ ಸರಳವಾಗಿ ಅಚರಿಸಿದರು.

ಎಸ್ಸೆಸ್ಸೆಫ್ ವತಿಯಿಂದ ಕಿಟ್ ವಿತರಣೆ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡೆರೇಷನ್ ಎಸ್ಸೆಸ್ಸೆಫ್ ಮೊಗರ್ಪಣೆ ಶಾಖೆಯ ವತಿಯಿಂದ ರಮಳಾನ್ ಹಬ್ಬದ ಪ್ರಯುಕ್ತ ಮೊಗರ್ಪಣೆ ಜಮಾಅತ್ ವ್ಯಾಪ್ತಿಯ ಇಪ್ಪತ್ತೈದರಷ್ಟು ಅರ್ಹ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ರಮಳಾನ್ ಹಾಗೂ ಈದ್ ಕಿಟ್ ವಿತರಣೆಯು ನಡೆಯಿತು. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಓರ್ವ ಸಹೋದರನ ಕುಟುಂಬಕ್ಕೆ ಸುಮಾರು ಹತ್ತು ಸಾವಿರ ರೂಪಾಯಿ ಹಾಗೂ ಓರ್ವ ಬಡ ಉಸ್ತಾದರ ಸಂಕಷ್ಟಕ್ಕೆ ಸ್ಪಂದಿಸಿ ಸುಮಾರು ಇಪ್ಪತ್ತೊಂದು ಸಾವಿರ ರೂಪಾಯಿಯನ್ನು ಧನ ಸಹಾಯ ರೂಪದಲ್ಲಿ ನೀಡಲಾಯಿತು. ಊರ ದಾನಿಗಳ ಉದಾರ ಸಹಾಯ- ಸಹಕಾರದಿಂದ ಸುಮಾರು ಅರುವತ್ತೈದು ಸಾವಿರ ರೂಪಾಯಿಯ ಸಹಾಯವನ್ನು ಮೊಗರ್ಪಣೆ ಶಾಖೆ ಎಸ್ಸೆಸ್ಸೆಫ್ ವತಿಯಿಂದ ನೀಡಲಾಗಿದ್ದು, ವಿತರಣೆಯ ಸಂದರ್ಭ ಸಮಿತಿಯ ನಾಯಕರು ಉಪಸ್ಥಿತರಿದ್ದರು.

ಅರಂತೋಡಿನ ತೆಕ್ಕಿಲ್ ನಿವಾಸದಲ್ಲಿ ಸರಳವಾಗಿ ಈದುಲ್ ಫಿತ್ರ್ ಆಚರಿಸಲಾಯಿತು. ಹಿರಿಯರಾದ ಟಿ.ಎಮ್.ಬಾಬಾ ಹಾಜಿ ತೆಕ್ಕಿಲ್,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್,ಟಿ.ಎಮ್.ಜಾವೇದ್ ತೆಕ್ಕಿಲ್,ಟಿ.ಎಮ್.ಶಾಯನ್ ತೆಕ್ಕಿಲ್,ಟಿ.ಎಮ್.ಟಿ.ಎಮ್. ಜಝೀಲ್ ತೆಕ್ಕಿಲ್,ಟಿ.ಎಮ್.ಶೈನ್ ತೆಕ್ಕಿಲ್ ಇದ್ದರು.