ಸುಳ್ಯದಲ್ಲಿ ಅಕ್ರಮ-ಸಕ್ರಮ ಸಮಿತಿ ಬೈಠಕ್-೬೧ ಕಡತ ವಿಲೇವಾರಿ

ಸುಳ್ಯ, ಜೂ.೫- ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಕ್ರಮ ಸಕ್ರಮ ಸಮಿತಿ ಸುಳ್ಯ ತಾಲೂಕು ವ್ಯಾಪ್ತಿಯ ಬೈಠಕ್ ಸುಳ್ಯ ತಾಲೂಕು ಕಛೇರಿ
ಸಭಾಂಗಣದಲ್ಲಿ ಗುರುವಾರ ಸಮಿತಿ ಅಧ್ಯಕ್ಷ ಸಚಿವ ಎಸ್ ಅಂಗಾರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಳ್ಯ ತಾಲೂಕಿನ ೬೧ ಕಡತಗಳನ್ನು ಪರಿಶೀಲಿಸಿ ಮಂಜೂರಾತಿ ಅನುಮತಿ ನೀಡಿದರು. ಅಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ,ಗುಣವತಿ ಕೊಲ್ಲಂತ್ತಡ್ಕ,ಬಾಳಪ್ಪ ಕಳಂಜ,ಸುಳ್ಯ ತಹಸೀಲ್ದಾರ್ ಅನಿತಾಲಕ್ಷ್ಮಿ,ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ,ಪಂಜ ಹೋಬಳಿ ಕಂದಾಯ ನಿರೀಕ್ಷಕ ಎಂ.ಎಲ್ ಶಂಕರ್ ವಿವಿಧ
ಗ್ರಾಮಗಳ ಗ್ರಾಮಲೆಕ್ಕಧಿಕಾರಿ ಉಪಸ್ಥಿತರಿದ್ದರು.