ಸುಳಿವೇ ಇಲ್ಲದ ಕೊಲೆ ಪ್ರಕರಣ ಭೇದಿಸಿದ ಪಂಡಿತ ಸಗರ ಅವರಿಗೆ ಮುಖ್ಯಮಂತ್ರಿ ಪದಕ ಪ್ರದಾನ

ಕಲಬುರಗಿ:ಎ.17:ಮಬ್ಬುಗತ್ತಲಾಗುವ ಹೊತ್ತಿನಲ್ಲಿ ಸಣ್ಣದೊಂದು ಸುಳಿವು ಬಿಡದೆ ಉದ್ಯಮಿ ಮೇಲೆ ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ ಪ್ರಕರಣವನ್ನು ಪತ್ತೆ ಮಾಡುವ ಮೂಲಕ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ ಕಲಬುರಗಿಯ ಅಶೋಕ ನಗರ ಠಾಣೆಯ ಪೆÇಲೀಸ್ ಇನ್ಸಪೆಕ್ಟರ್ (ಪಿಐ) ಪಂಡಿತ ಸಗರ ಅವರು ಮುಖ್ಯಮಂತ್ರಿಗಳ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಕಮೀಷನ್‍ರೇಟ್‍ಗೆ ಕೀರ್ತಿ ತಂದಿದ್ದಾರೆ.
ನಗರದ ಗೋದುತಾಯಿ ಕಾಲನಿಯ ಶಿವ ಮಂದಿರ ಹತ್ತಿರ ಆಗಸ್ಟ್ 27, 2020 ರಂದು ಸಂಜೆ ಗ್ರಾನೈಟ್ ಉದ್ಯಮಿ ಸುನೀಲ್ ರಂಕಾ (42) ಎಂಬುವರನ್ನು ದ್ವಿಚಕ್ರ ವಾಹನದ ಮೇಲೆ ಬಂದ ಹಂತಕರು ಗುಂಡಿಕ್ಕಿ ಕೊಲೆ ಮಾಡಿ, ಹಣದೊಂದಿಗೆ ಪರಾರಿಯಾಗಿದ್ದರು. ಇಡಿ ಘಟನೆ ಸಿನಿಮೀಯ ರೀತಿಯಲ್ಲಿ ನಡೆದು ಹೋಗಿತ್ತು. ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೊಳಗಾಗಿದ್ದ ಕೊಲೆ ಪ್ರಕರಣದ ಯಾವೊಂದು ಸುಳಿವು ಇರಲಿಲ್ಲ. ಪತ್ತೆ ಮಾಡುವುದು ಪೆÇಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಎಲ್ಲ ಅಧಿಕಾರಿಗಳು ಇನ್ನಿಲ್ಲದ ಶೋಧ ನಡೆಸಿ ಮಾಹಿತಿ ಕಲೆ ಹಾಕಿದರೂ ಹಂತಕರ ಬಗ್ಗೆ ಯಾವುದೇ ಸುಳಿವುಗಳು ಸಿಗದೆ ಕೈಚೆಲ್ಲುವ ಹಂತದಲ್ಲಿರುವಾಗ ಸಣ್ಣದೊಂದು ಮಾಹಿತಿಯ ಜಾಡು ಅರಸಿ ಅತ್ಯಂತ ಚಾಣಾಕ್ಷತನದಿಂದ ಮತ್ತು ತಂತ್ರಜ್ಞಾನ ಬಳಿಸಿಕೊಂಡು ಐಜಿ ಮತ್ತು ಪೆÇಲೀಸ್ ಕಮೀಷನ್‍ರ್ ಎನ್.ಸತೀಶಕುಮಾರ, ಡಿಸಿಪಿ ಕಿಶೋರಬಾಬು ಅವರ ಮಾರ್ಗದರ್ಶನದಲ್ಲಿ ಕೊಲೆ ಪ್ರಕರಣವನ್ನು ಇನ್‍ಸ್ಪೆಕ್ಟರ್ ಪಂಡಿತ ಸಗರ ನೇತೃತ್ವದ ತನಿಖಾ ತಂಡದವರು ಡಿ.10, 2020 ರಂದು ಕೇಸ್ ಭೇದಿಸುವಲ್ಲಿ ಯಶಸ್ವಿಯಾಗಿದ್ದರು.
ನಾಡಪಿಸ್ತೂಲ್‍ನಿಂದ ಉದ್ಯಮಿ ಸುನಿಲ್ ಎದೆಗೆ ಕಾಡತೂಸು ಹೊಕ್ಕಿಸಿ ಹಣ ಲೂಟಿ ಮಾಡಿದ್ದ ಬಿದ್ದಾಪುರ ಕಾಲನಿಯ ಅಂಬರೀಶ ಸುಭಾಷ ರಾಠೋಡ, ಶರಣಸಿರಸಗಿ ತಾಂಡಾದ ರಾಜಶೇಖರ ಅಲಿಯಾಸ್ ಶೇಖರ ರೇವಣಸಿದ್ಧ ರಾಠೋಡ್, ವಿಜಯಪುರ ಜಿಲ್ಲೆಯ ಖತೀಜಾಪುರದ ನಾಮದೇವ ಹೇಮು ಲೋಣಾರಿ ಮತ್ತು ಹಡಗಿಲ್ ಹಾರುತಿ ಗ್ರಾಮದ ಗುಂಡು ಶರಣಪ್ಪ ರಾಠೋಡ ಎಂಬುವರನ್ನು ಬಂಧಿಸಿ, ಬೈಕ್ 75 ಸಾ. ರೂ.ನಗದು, 4 ಮೊಬೈಲ್ ಫೆÇೀನ್‍ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಸವಾಲಿನ ಪ್ರಕರಣವನ್ನು ಪತ್ತೆ ಮಾಡಿದ ಹಿನ್ನೆಲೆಯಲ್ಲಿ ಪಂಡಿತ್ ಸಗರ ಅವರ ಹೆಸರನ್ನು 2020ನೇ ಸಾಲಿನ ಮುಖ್ಯಮಂತಿಗಳ ಚಿನ್ನದ ಪದಕಕ್ಕೆ ಆಯ್ಕೆ ಮಾಡಲಾಗಿತ್ತು.

ಈಚೆಗೆ ಬೆಂಗಳೂರಿನ ಕೊರಮಂಲಗದ ಕೆಎಸ್‍ಆರ್‍ಪಿ 3ನೇ ಬಟಾಲಿಯನ್ ಮೈದಾನದಲ್ಲಿ ಗೃಹ ಇಲಾಖೆ ಆಯೋಜಿಸಿದ್ದ ಪೆÇಲೀಸ್ ಧ್ವಜ ಮತ್ತು ಕಲ್ಯಾಣ ದಿನಾಚಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಚಿನ್ನದ ಪದಕವನ್ನು ಇನ್‍ಸ್ಪೆಕ್ಟರ್ ಪಂಡಿತ ಸಗರ ಅವರಿಗೆ ಪ್ರದಾನ ಮಾಡಿ ಗೌರವಿಸಿದರು. ಈ ಸಮಾರಂಭದಲ್ಲಿ 115 ಪೆÇಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಪೆÇಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಮೊದಲಾದವರಿದ್ದರು.

ತನಿಖೆ ಮಾಡಿದ್ದನ್ನು ಮತ್ತು ಸೇವೆ ಪರಿಗಣಿಸಿ ಸಿಎಂ ಪದಕ ಲಭಿಸಿರುವುದು ಹೆಮ್ಮೆ ಮೂಡಿಸಿದೆ. ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಸ್ವೀಕರಿಸಿದ್ದು ಖುಷಿ ತರಿಸಿದೆ.ಹಿರಿಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಇದಕ್ಕೆ ಕಾರಣವಾಗಿದೆ. ಇದು ಕೇವಲ ನನಗಲ್ಲ ಎಲ್ಲ ಪೆÇಲೀಸರಿಗೆ ಸಂದ ಗೌರವ. ಇದರಿಂದಾಗಿ ಹೊಣೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಪಂಡಿತ ಸಗರ ಇನ್‍ಸ್ಪೆಕ್ಟರ್ ಅಶೋಕ ನಗರ ಠಾಣೆ ಕಲಬುರಗಿ

ಸಿನೀಮಯ ರೀತಿಯಲ್ಲಿ ಎಳ್ಳು ಕಾಳಷ್ಟು ಸುಳಿವುಬಿಡದಂತೆ ಹಂತಕರು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆ ಮಾಡಲು ಇನ್ನಿಲ್ಲದ ಶ್ರಮ ಹಾಕಲಾಗಿತ್ತು.ತಂತ್ರಜ್ಞಾನ ಬಳಿಸಿಕೊಳ್ಳಲಾಗಿತ್ತು. ಪಂಡಿತ್ ಸಗರಗೆ ಸಿಎಂ ಮೆಡಲ್ ಲಭಿಸಿರುವುದು, ಪೆÇಲೀಸ್‍ರಿಗೆ ಸವಾಲಾಗಿದ್ದ ಉದ್ಯಮಿ ಸುನಿಲ್ ರಂಕಾ ಹತ್ಯೆ ಪ್ರಕರಣ ಭೇದಿಸಲು ಶ್ರಮಿಸಿದ ಎಲ್ಲರಿಗೂ ಸಿಕ್ಕ ಗೌರವವಾಗಿದೆ.
| ಎನ್.ಸತೀಶಕುಮಾರ ಐಜಿ ಮತ್ತು ಪೆÇಲೀಸ್ ಕಮೀಷನರ್ ಕಲಬುರಗಿ