ಸುಲ್ತಾನಪುರ ಮಾರುಕಟ್ಟೆ ಸಾಮಾಜಿಕ ಅಂತರವೇ ಮಾಯ

ಕಲಬುರಗಿ ಏ 29: ಜನತಾ ಕಫ್ರ್ಯೂ ಜಾರಿಯಲ್ಲಿರುವದರಿಂದ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಸಾರ್ವಜನಿಕರು ತಮ್ಮ ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ ಪಡಿಸಲಾಗಿದೆ.
ಈ ಸಮಯದಲ್ಲೂ ಕೊರೋನಾ ನಿಯಂತ್ರಣದ ನಿಯಮಗಳನ್ನು ಪಾಲಿಸುವದು ಅಗತ್ಯ.ಆದರೆ ಇಂದು ನಗರದ ಸುಲ್ತಾನಪುರ ತರಕಾರಿ ಮಾರುಕಟ್ಟೆಯಲ್ಲಿ ಕಂಡು ಬಂದ ದೃಶ್ಯವೇ ಬೇರೆ.
ಗಿಜಿಗುಡುವ ವಾಹನಗಳು, ವಿಪರೀತ ಜನ ಸಂದಣಿ, ಅಲ್ಲೊಬ್ಬರು ಇಲ್ಲೊಬ್ಬರು ಮಾಸ್ಕ್ ಧರಿಸಿದ್ದು ಕಾಣಿಸಿತು,ಸಾಮಾಜಿಕ ಅಂತರವೇ ಮಾಯವಾಗಿತ್ತು.ಜನ ತರಕಾರಿ ಹಣ್ಣು ಹಂಪಲು ಖರೀದಿಗಾಗಿ ಸಾಮಾಜಿಕ ಅಂತರ ಲೆಕ್ಕಿಸದೇ ವ್ಯವಹಾರಕ್ಕಿಳಿದರು.
ನಿಯಮಗಳಿರುವದೇ ಮುರಿಯಲು ಎಂಬ ಜನವಿರೋಧಿ ಸಿದ್ಧಾಂತ ಪಾಲಿಸಿದರೆ,ಕೊರೋನಾ ನಿಯಂತ್ರಣ ಎಂತಹ ಲಾಕ್‍ಡೌನ್ ಹೇರಿದರೂ ಸಾಧ್ಯವಿಲ್ಲ.ಜನ ಸ್ವಯಂ ನಿಯಂತ್ರಣ ಪಾಲಿಸಿ ಜಾಗೂರಕತೆಯಿಂದ ವರ್ತಿಸಿದರೆ ಕೊರೋನಾ ಪ್ರಸರಣ ತಡೆಗಟ್ಟಲು ಸಾಧ್ಯವಾಗುತ್ತದೆ.