ಸುಲೇಪೇಟ ಪಿಡಿಒ ರಾಮಕೃಷ್ಣ ಅಮಾನತು

ಚಿಂಚೋಳಿ,ಸೆ.26-ಸರ್ಕಾರದ ಅನುದಾನ ದುರ್ಬಳಕೆ ಆರೋಪದಡಿ ಸುಲೇಪೇಟ (ಪ್ರಸ್ತುತ ಶಾದಿಪುರ) ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.
ಸದಸ್ಯರ ಗೌರವಧನ ಹಾಗೂ ಸ್ವಚ್ಛತಾ ಸಿಬ್ಬಂದಿಯ 8 ತಿಂಗಳ ವೇತನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜನತಾ ದರ್ಶನದಲ್ಲಿ ಸುಲೇಪೇಟ ಗ್ರಾಪಂ ಸದಸ್ಯರು ಮತ್ತು ಸ್ವಚ್ಛತಾ ಅಧಿಕಾರಿಗಳು ದೂರು ನೀಡಿದ್ದರು. ಈ ಬಗ್ಗೆ ತಾಪಂ ಇಒ ಸಲ್ಲಿಸಿದ ವರದಿ ಆಧರಿಸಿ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.