ಸುಲೇಪೇಟಗೆ ಭೇಟಿ ನೀಡಿದ ಕೆಆರ್ ಪಿಪಿ ಅಭ್ಯರ್ಥಿ

ಸೇಡಂ,ಮಾ, 03: ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಲೇಪೇಟ ಗ್ರಾಮಕ್ಕೆ ಕೆಆರ್ ಪಿಪಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿಯವರು ಬೇಟಿ ನೀಡಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್, ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆಯಲ್ಲಿ
ಶಿವಲಿಂಗ ರೆಡ್ಡಿ ಪಾಟೀಲ್ ಬೆನಕನಹಳ್ಳಿ,ಹಿರಿಯರಾದ ಜಗನ್ನಾಥ ರೆಡ್ಡಿ,ಸಯ್ಯದ್ ಸಾಧಿಕ್, ಮಾಣಿಕ್ ರೆಡ್ಡಿ, ಭೀಮರೆಡ್ಡಿ ಸೇರಿದಂತೆ ಸುಲೇಪೇಟನ ಗ್ರಾಮಸ್ಥರು ಹಾಗೂ ಕೆಆರ್ ಪಿಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.