
ನಂಜನಗೂಡು: ಮಾ.10:- ರಾಜ್ಯದಲ್ಲಿ ಸುಲಿಗೆ ಭ್ರಷ್ಟ ಸುಳ್ಳಿನ ಸರ್ಕಾರ ಅದರಲ್ಲೂ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸುಲಿಗೆ ಭ್ರಷ್ಟಾಚಾರ ನಡೆಯುತ್ತಿದೆ ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧ್ರುವನಾರಾಯಣ್
ತಾಲೂಕಿನ ಸಿರಮಳ್ಳಿ ಹುಸ್ಕೂರು ವಳಗೆರೆ ಬೆಳೆ ಲೆ ಅಂಬಳೆ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಚುನಾವಣೆ ಪ್ರಚಾರ ಆರಂಭಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ದ್ರುವ ನಾರಾಯಣ್
ಮುಂದುವರೆದು ಮಾತನಾಡಿದವರು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸುಲಿಗೆ ಸುಳ್ಳಿನ ಮತ್ತು ಭ್ರಷ್ಟ ಸರ್ಕಾರ ಒಂದು ಲೇವಡಿ ಮಾಡಿದರು ಭ್ರಷ್ಟಾಚಾರದ ಹಣದಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಭ್ರಮೆಯಲ್ಲಿದ್ದಾರೆ ಅದು ಸಾಧ್ಯವಿಲ್ಲ ಇನ್ನು ಎರಡು ಮೂರು ತಿಂಗಳ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ಬರುತ್ತದೆ ಅದು ಕಾಂಗ್ರೆಸ್ ಸರ್ಕಾರ ಪತ್ರಿಕೆಗಳಲ್ಲಿ ಟಿವಿ ಗಳಲ್ಲಿ ಹಲವಾರು ಸಮೀಕ್ಷೆಗಳಲ್ಲಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವದಲ್ಲಿ ಸಂಶಯವಿಲ್ಲ ಎಂದು ಸುದ್ದಿ ಹರಡುತ್ತಿದೆ ಇದು ಸತ್ಯವಾಗಿದೆ ಆದ್ದರಿಂದ ಅಭಿವೃದ್ಧಿ ಮಾಡದೆ ಇರುವ ಗೆದ್ದ ದಿನದಿಂದ ಬರೀ ಭ್ರಷ್ಟಾಚಾರ ಲೂಟಿ ಮಾಡಿರುವ ಲಂಚ ಪಡೆಯುತ್ತಿರುವ ಈ ಸರ್ಕಾರವನ್ನು ಕಿತ್ತೊಗೆದು ಬಡವರ ಪರ ಕಾರ್ಮಿಕರ ಪರ ದಿನ ದಲಿತರ ಪರ ಇರುವ ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದರು
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಪ್ರತಿಯೊಂದು ಕೆಲಸಕ್ಕೂ ಹಣ ಸುಲಿಗೆ ನಡೆದಿದೆ ನಡೆಯುತ್ತಿದೆ ಯಾವ ಕಚೇರಿಗೆ ಹೋದರು ಕೂಡ ಹಣವಿಲ್ಲದೆ ಕೆಲಸವಾಗುತ್ತಿಲ್ಲ ಅದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಅಭಿವೃದ್ಧಿಪರ ಮತ ಚಲಾಯಿಸಬೇಕೆಂದರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಎಷ್ಟು ಖಚಿತವೋ ಕೊಟ್ಟ ಮಾತಿನಂತೆ ಕಳೆದ ಐದು ವರ್ಷ ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದಂತಹ 165ಕ್ಕೂ ಹೆಚ್ಚು ಕಡಿಮೆ ನೆರವೇರಿಸಿದ್ದೇವೆ, ಅದೇ ರೀತಿ ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಅಂದರೆ 200 ಯೂನಿಟ್ ಉಚಿತ ವಿದ್ಯುತ್ ಒಂದು ಕುಟುಂಬಕ್ಕೆ 2000 10 ಕೆಜಿ ಅಕ್ಕಿ ಎಂದು ಪ್ರಯಾಣಿಕೆಯಲ್ಲಿ ತಿಳಿಸಿದ್ದಾರೆ ಅದೇ ರೀತಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು
ಮಾಜಿ ಶಾಸಕ ಕಳ್ಳಲೆ ಕೇಶವಮೂರ್ತಿ ಮಾತನಾಡಿ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆ ದ್ರುವ ನಾರಾಯಣ್ ಅವರಿಗೆ ಮತ ನೀಡಿ ಇವರು ಐದು ವರ್ಷ ಸಂಸದರಾಗಿದ್ದಾಗ ಹಲವಾರು ಕೋಟಿಗಟ್ಟಲೆ ಅನುದಾನ ತಂದು ಕ್ಷೇತ್ರಗಳಿಗೆ ಅಭಿವೃದ್ಧಿಪಡಿಸಿದ್ದಾರೆ ರಸ್ತೆಗಳು 126 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ನಂಜನಗೂಡಿಯಿಂದ ಉಳ್ಳ ಹಳ್ಳಿ ಭಾಗಕ್ಕೆ ಉತ್ತಮ ರಸ್ತೆಗಳು ಇನ್ನು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಐದು ವರ್ಷದ ಸಾಧನೆ ಮತ್ತು ಈಗಿನ ಬಿಜೆಪಿ ಸರ್ಕಾರ 5 ವರ್ಷ ಸಾಧನೆಯ ವ್ಯತ್ಯಾಸ ನೋಡುತ್ತಿದ್ದಾರೆ ಈ ಬಾರಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ನಿಮ್ಮಗಳ ಆಶೀರ್ವಾದದಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವರಾಜು ಉಸ್ತುವಾರಿ ಸೋಮೇಶ್ ಬ್ಲಾಕ್ ಅಧ್ಯಕ್ಷ ಶ್ರೀಕಂಠ ನಾಯಕ ಮುಖಂಡರಾದ ಮಾರುತಿ ಸೇರಿದಂತೆ ಇತರರು ಇದ್ದರು.