ಸುಲಭ ಶೌಚಾಲಯ ಉದ್ಘಾಟಿಸಿದ ಶಾಸಕಿ ರೂಪಕಲಾ

ಕೆಜಿಎಫ್,ಆ.೨೪- ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ತಯಾರು ಮಾಡಲಾಗಿದ್ದು ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಈಗಾಗಲೇ ೮ ಕೋಟಿ ಅನುದಾನದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು ತುರ್ತು ಚಿಕಿತ್ಸ ಘಟಕ ಸೇರಿದಂತೆ ಇಜಿಜಿ ಘಟಕವನ್ನು ಪ್ರಾರಂಭಿಸಲಾಗಿದೆ ಇದರಿಂದ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪಿಪಿಟಿ ಆಧಾರದ ಮೇರೆದಡಿ ೩೦ ವರ್ಷಗಳಿಗೆ ಸುಲಭ ಇಂಟರ್ ನ್ಯಾಷನಲ್ ಸಂಸ್ಥೆಯು ೪೫ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಬಳಕೆಗಾಗಿ ಹಣ ನೀಡಿ ಬಳಕೆ ಮಾಡಲು ಸುಲಭ ಶೌಚಾಲಯವನ್ನು ನಿರ್ಮಿಸಿದ್ದು ಇದರಿಂದ ರೋಗಿಗಳನ್ನು ಹಾರೈಕೆ ಮಾಡಲು ಆಗಮಿಸುವ ರೋಗಿಗಳ ಸಂಭಂದಿಕರಿಗೆ ಮತ್ತು ನಾಗರೀಕರಿಗೆ ಅನುಕೂಲವಾಗಲಿದೆ ಎಂದರು.