ಸುಲಭವಾಗಿ ಉದ್ಯೋಗ ಲಭಿಸುವ ಕೋರ್ಸ ಎಂದರೆ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗ

ಕಲಬುರಗಿ:ಮಾ.20:ಕಠಿಣ ಪರಿಶ್ರಮ, ಶ್ರದ್ಧೆಯಿಂದ ಪಾಠ ಆಲಿಸುವಿಕೆ, ಪ್ರಾಯೋಗಿಕ ಜ್ಞಾನ, ಕಾಲಕ್ಕೆ ಅನುಗುಣವಾದ ತಂತ್ರಜ್ಞಾನಗಳೊಂದಿಗೆ ಹೊಂದುವ ಸಾಮಥ್ರ್ಯ, ಅಂತರಾತ್ಮಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದು ಮುಂತಾದವುಗಳು ವಿದ್ಯಾರ್ಥಿಗಳ ಭವಿಷ್ಯದ ಉದ್ಯೋಗ ಜೀವನದ ಉನ್ನತಿಗೆ ಸಹಕಾರವಾಗಬಲ್ಲ ಅಂಶಗಳು ಎಂದು ಜಾರಖಂಡ ರಾಜ್ಯದ ರಾಂಚಿಯ ಮೆಕಾನ್ ಲಿ., ಕಂಪನಿಯ ಸಹಾಯಕ ಯೋಜನಾ ಇಂಜನಿಯರಾದ ಮತ್ತು ಪಿ.ಡಿ.ಎ. ಇಂಜನಿಯರಿಂಗ್ ಕಾಲೇಜಿನ್ ಸಿರಾಮಿಕ್ ವಿಭಾಗದ ಮಾಜಿ ವಿದ್ಯಾರ್ಥಿಯಾದ ಶ್ರೀ ಸಿದ್ಧಾರ್ಥ ಶರ್ಮಾ ರವರು ಪಿ.ಡಿ.ಎ. ಇಂಜನಿಯರಿಂಗ್ ಕಾಲೇಜಿನ ಸಿರಾಮಿಕ್ ಮತ್ತು ಸಿಮೆಂಟ್ ಟೆಕ್ನಾಲಜಿ ವಿಭಾಗವು ಆಯೋಜಿಸಿದ ಟೆಕ್ವಿಪ್ ಪ್ರಾಯೋಜಿತ “ಮಾಜಿ ವಿದ್ಯಾರ್ಥಿಯೊಡನೆ ಸಂವಾದ” (ಅಲ್ಯೂಮಿನಿ ಇಂಟರ್ಯಾಕ್ಷನ್ ವಿತ್ ಸ್ಟೂಡೆಂಟ್ಸ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

ವಿದ್ಯಾರ್ಥಿಗಳೊಡನೆ ಸಂವಾದ ಮಾಡುತ್ತಾ ನಮ್ಮ ಸಿರಾಮಿಕ್ ಮತ್ತು ಸಿಮೆಂಟ್ ಟೆಕ್ನಾಲಜಿ ವಿಭಾಗವು ಭಾರತದ ಪ್ರಸಿದ್ಧ ಕೆಲವೆ ಸಿರಾಮಿಕ್ ವಿಭಾಗಗಳಲ್ಲಿ ಒಂದು ಇಲ್ಲಿಯ ನುರಿತ ಮತ್ತು ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಐ.ಐ.ಟಿ. ಐ.ಐ.ಎಸ್.ಸಿ. ಗಳಲ್ಲಿ ವ್ಯಾಸಂಗ ಮುಗಿಸಿದ ಪ್ರಾಧ್ಯಾಪಕ ವೃಂದ ಹೊಂದಿದೆ. ಮತ್ತು ಮುಖ್ಯವಾಗಿ ಈ ವಿಭಾಗವು ಸುಲಭವಾಗಿ ಉದ್ಯೋಗ ಲಭಿಸುವ ಕಾಲೇಜಿನ ಒಂದೇ ವಿಭಾಗ ಎಂದರೆ ಸಿರಾಮಿಕ್ ವಿಭಾಗ ಎಂದು ನುಡಿದರು. ನಿಮ್ಮ ಎಲ್ಲಾ ಸಹಾಯಕ್ಕೆ ನಾನು ಸದಾ ಸಿದ್ಧ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ್ ಟೆಕ್ಯೂಪ್ ಸಂಯೋಜಕರಾದ ಪ್ರೊ. ಶರಣ ಪಡಶೆಟ್ಟಿ ರವರು ಉನ್ನತ ಸ್ಥಾನದಲ್ಲಿರುವ ಮಾಜಿ ವಿದ್ಯಾರ್ಥಿಗಳಿಂದ ಜ್ಞಾನದ ಲಾಭ ಪಡೆಯಲು ಇಂತಹ ಕಾರ್ಯಕ್ರಮಗಳು ಅತ್ಯವಶ ಇಂತಹ ವಿದ್ಯಾರ್ಥಿಗಳ ಏಳಿಗೆಗೆ ಕಾರಣವಾಗುವ ಕಾರ್ಯಕ್ರಮಗಳಿಗೆ ಟೆಕ್ಯೂಪ್ ವಿಭಾಗವು ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಅಧ್ಯಕ್ಷತೆ ವಹಿಸಿದ ವಿಭಾಗದ ಮುಖ್ಯಸ್ಥರಾದ ಡಾ. ಅಮರೇಶ ರವರು ಯಶಸ್ಸು ಹೊಂದಿದ ಮಾಜಿ ವಿದ್ಯಾರ್ಥಿಗಳೊಡನೆ ಸಂವಾದದಂತಹ ಕಾರ್ಯಕ್ರಮದಿಂದ ನೀವೆಲ್ಲಾ ಸ್ಪೂರ್ತಿ ಪ್ರೇರಣೆ ಪಡೆದು ಉತ್ತಮ ವಿದ್ಯಾರ್ಥಿಗಳಾಗಬೇಕೆಂದು ಹಾರೈಸಿದರು. ಸಹ ಪ್ರಾಧ್ಯಾಪಕರಾದ ಪ್ರೊ. ಪವನ ರಂಗದಾಳ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಬಾಬುರಾವ ಶೇರಿಕಾರ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ. ಗುಂಡು ಕೋಳಕುರ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಶ್ರೀಧರ ಪಾಂಡೆ, ಡಾ. ಎಸ್.ಬಿ. ಪಾಟೀಲ, ಡಾ. ವಿರೇಶ ಮಲ್ಲಾಪೂರ, ಪ್ರೊ. ಪವನ ರಂಗದಾಳ, ಪ್ರೊ. ಹಂಸರಾಜ ಸಾಹು ಮತ್ತು ಸಿರಾಮಿಕ್ ವಿಭಾಗದ ಪದವಿ ಮತ್ತು ಎಮ್.ಟೆಕ್ ಮಟೆರಿಯಲ್ಸ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಅನೇಕ ವಿದ್ಯಾರ್ಥಿಗಳು ಸಂವಾದದಲ್ಲಿ ವಿಚಾರ ವಿನಿಮಯ ಮಾಡಿಕೊಂಡರು.