ಸುರ್ಜೇವಾಲ ಬಳಿ ಮಾತಾಡಲಿ:ಡಿಕೆಸು

ಬೆಂಗಳೂರು,ಮೇ೨೩:ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪೂರ್ಣಾವಧಿ ಸಿಎಂ ಎಂಬ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್‌ನ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದು, ಸಂಸದ ಡಿ.ಕೆ ಸುರೇಶ್, ಎಂ.ಬಿ ಪಾಟೀಲ್‌ರವರಿಗೆ ಇದೆಲ್ಲ ಬೇಡ, ಅವರಿಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರ ಬಳಿ ಮಾತನಾಡಲಿ ಎಂದು ಗರಂ ಆಗಿ ಹೇಳಿದರು.
ಎಂ.ಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಲು ನನಗೂ ಬರುತ್ತೆ. ಆದರೆ, ಈಗಲೇ ಅದೆಲ್ಲ ಬೇಡ ಎಂದು ಅವರು ಹೇಳಿದರು.
ಪ್ರಿಯಾಂಕ್‌ಖರ್ಗೆ ಹೇಳಿಕೆ
ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ಖರ್ಗೆ, ಈ ಸಮಯದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ, ಸಚಿವ ಎಂ.ಬಿ ಪಾಟೀಲ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಬೇರೆ ಯಾರೂ ನಿರ್ಧಾರ ಮಾಡಲ್ಲ ಎಂದರು.