ಸುರ್ಜೇವಾಲಾ ಮಂತ್ರ ಕಾಂಗ್ರೆಸ್ ಭಿನ್ನಮತ ಸಮನ್

ಕಾಂಗ್ರೆಸ್ ಟಿಕೆಟ್ ಕಟ್ ಬಸನಗೌಡ ಬೆಂಬಲಿಗರು ಆಕ್ರೋಶ
ಸಿಂಧನೂರು,ಏ.೨೧- ಬಸನಗೌಡ ಬಾದರ್ಲಿಗೆ ಕಾಂಗ್ರೆಸ್ ಟಿಕೆಟ್ ಕಟ್ ಆಗಿದ್ದರಿಂದ ಬಸನಗೌಡ ಬಾದರ್ಲಿ ಬೆಂಬಲಿಗರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಮುಂದೆ ಹೈಕಮಾಂಡ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಟಿಕೆಟ್ ಸಿಗದೆ ಇರುವುದರಿಂದ ಬಸನಗೌಡ ಬಾದರ್ಲಿ ಪಕ್ಷದ ವಿರುದ್ಧ ಬಂಡಾಯ ಏದ್ದು ಪಕ್ಷಾಂತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದರು. ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ಬಾದರ್ಲಿ ಇದೆ ಥರ ಚುನಾವಣೆಯಲ್ಲಿ ಕಾದಾಡಿದರೆ ನಮಗೆ ಲಾಭ ಎನ್ನುವ ಲೆಕ್ಕಾಚಾರದಲ್ಲಿ ಜೆಡಿಎಸ್ ಬಿಜೆಪಿಯ ಅಭ್ಯರ್ಥಿಗಳು ಮಾತನಾಡಿ ಕೊಳ್ಳುತ್ತಿದ್ದರು.
ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಾಮಪತ್ರ ಸಲ್ಲಿಸಿದರೆ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಬಸನಗೌಡ ಬಾದರ್ಲಿ ನಾಮಪತ್ರ ಪತ್ರ ಸಲ್ಲಿಸಿದ್ದರು ಯಾರು ಅಧಿಕೃತ ಯಾರು ಅನಧಿಕೃತ ಅಭ್ಯರ್ಥಿಯಾಗುತ್ತಾರೆ. ನಾವು ಯಾರ ಪರವಾಗಿ ಕೆಲಸ ಮಾಡಬೇಕು ಎನ್ನುವ ಗೊಂದಲದಲ್ಲಿ ಪಕ್ಷದ ಮುಖಂಡರು. ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ ಹೈಕಮಾಂಡ ಅಂತಿಮವಾಗಿ ಅಳಿದು ತೂಗಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಹಂಪನಗೌಡ ಬಾದರ್ಲಿಗೆ ಟಿಕೆಟ್ ನೀಡಿತು ಇದರಿಂದ ಟಿಕೆಟ್ ಸಿಗುವ ಬಗ್ಗೆ ಆಸೆ ಹೊಂದಿದ್ದ ಬಸನಗೌಡರಿಗೆ ಕೊನೆ ಗಳಿಗೆಯಲ್ಲಿ ಹೈಕಮಾಂಡ್ ಟಿಕೆಟ್ ನೀಡದೆ ಕಡೆಗಣಿಸಿತು. ಇದರಿಂದ ಸಿಟ್ಟಿಗೆದ್ದ ಬಸನಗೌಡ ತಮ್ಮ ಬೆಂಬಲಿಗರ ಜೊತೆ ಚರ್ಚಿಸಿದ ನಂತರ ಪಕ್ಷದ ವಿರುದ್ಧ ಬಂಡಾಯ ವೆದ್ಧು ಪಕ್ಷಾಂತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದರಿಂದ ಪಕ್ಷದಲ್ಲಿದ್ದ ಭಿನ್ನಮತ ಸ್ಪೋಟಗೊಂಡು ಬೀದಿಗೆ ಬಂತು.
ಹೈಕಮಾಂಡ್ ಪಕ್ಷದ ಬಿನ್ನಮತ ಸಮನ ಮಾಡಲು ಪಕ್ಷಕ್ಕೆ ಡ್ಯಾಮೇಜ ಯಾಗುವದನ್ನು ತಪ್ಪಿಸುವ ಸಲುವಾಗಿ ರಾಜ್ಯ ಉಸ್ತುವಾರಿ ಯಾದ ಸುರ್ಜೆ ವಾಲಾರನ್ನು ಸಿಂಧನೂರಿಗೆ ದೂತನಾಗಿ ಕಳಿಸಿತು ಹೈಕಮಾಂಡ ಸೂಚನೆ ಮೇರೆಗೆ ಸುರ್ಜೆ ವಾಲಾ ಸಿಂಧನೂರಿಗೆ ಬಂದು ಬಿನ್ನಮತ ಸಮನ ಮಾಡಲು ಹರಸಾಹಸ ಪಡಬೇಕಾಯಿತು.
ಹಂಪನಗೌಡ ಹಾಗೂ ಬಸನಗೌಡರ ಜೊತೆ ಪ್ರತೇಕವಾಗಿ ಬೇಟಿ ಯಾಗಿ ಮಾತು ಕತೆ ನಡೆಸಿದರು ಪಕ್ಷದ ಟಿಕೆಟ್ ಸಿಗದೆ ಇರುವುದರಿಂದ ಬಸನಗೌಡ ಬೆಂಬಲರಿಗೆ ಕೋಪ ಬಂದಿರುವುದು ಸಹಜ ಹಿಂದೆ ನನಗೆ ಸಹ ಟಿಕೇಟ್ ಸಿಗಲಿಲ್ಲ ಆಗ ನಾನು ಸಿಟ್ಟು ಮಾಡಿಕೊಳ್ಳದೆ ಪಕ್ಷದಲ್ಲಿ ಕೆಲಸ ಮಾಡಿದ ಕಾರಣ ಇಂದು ಪಕ್ಷ ನನಗೆ ಮಹತ್ವದ ಸ್ಥಾನ ಮಾನ ನೀಡಿದೆ. ಬಸನಗೌಡ ಸಹ ತಾಳ್ಮೆಯಿಂದ ಇದ್ದರೆ ಮುಂದೆ ಅವರ ಭವಿಷ್ಯ ಉಜ್ವಲ ವಾಗಲಿದೆ ಎಂದರು.
ಈ ಸಲ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವದು ಗ್ಯಾರಂಟಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಸನಗೌಡರಿಗೆ ಸಚಿವ ಸಂಪುಟ ದರ್ಜೆಯ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಅಲ್ಲದೆ ಮುಂಬರುವ ತಾ.ಪಂ, ಜಿ.ಪಂ.ಸೇರಿದಂತೆ ಯಾವುದೇ ಚುನಾವಣೆಯ ಬಂದಾಗ ಬಸನಗೌಡರಿಗೆ ಶೇ.೫೦,% ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸುರ್ಜೆವಾಲಾ ಮಾತನಾಡಿ ಯಾವುದೇ ಕಾರಣಕ್ಕೆ ದುಡಕಿ ನಿರ್ಧಾರ ತೆಗೆದು ಕೊಂಡು ಆವೇಶಕ್ಕೆ ಒಳಗಾಗಿ ಆತುರ ನಿರ್ಧಾರದ ತೆಗದು ಕೊಂಡು ನಿಮ್ಮ ಭವಿಷ್ಯ ಹಾಳು ಮಾಡಿ ಕೊಳ್ಳ ಬೇಡಿ ಪಕ್ಷ ನಿಮ್ಮ ಕೈ ಬಿಡುವುದಿಲ್ಲ ಎಂದರು.
ಸುರ್ಜೆವಾಲಾ ಮಾತಿಗೆ ಬೆಲೆ ನೀಡಿ ಹೈಕಮಾಂಡ ಅದೇಶಕ್ಕೆ ಬಸನಗೌಡ ತಲೆ ಬಾಗಿದ್ದು ಅಂತು ಇಂತು ಸುರ್ಜೆವಾಲಾ ಮಂತ್ರದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಬಿನ್ನಮತ ಕೊನೆಗೂ ಶಾಂತಗೊಂಡಿದೆ ಭಿನ್ನಮತ ಮತ ಬಿಟ್ಟು ಹಂಪನಗೌಡ ಗೌಡರ ಗೆಲವಿಗಾಗಿ ಶ್ರಮಿಸುವಂತೆ ಕಟ್ಟು ನಿಟ್ಟಿನ ಸೂಚನೆ ಬಸನಗೌಡರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ.
ಹೈಕಮಾಂಡ ಆದೇಶ ಕ್ಕೆ ತಲೆ ಬಾಗಿ ಬಸನಗೌಡ ಹಂಪನಗೌಡರ ಜೊತೆ ಗೂಡಿ ಚುನಾವಣೆ ಮಾಡುತ್ತಾರಾ ಇಲ್ಲ ಪ್ರತೇಕವಾಗಿ ಚುನಾವಣೆ ಪ್ರಚಾರ ಮಾಡಿ ಹಂಪನಗೌಡರ ಪರವಾಗಿ ಕೆಲಸ ಮಾಡುತ್ತಾರೊ ಎನ್ನುವದನ್ನು ಕಾಯ್ದ ನೋಡ ಬೇಕು ಟಿಕೆಟ್ ಗೊಂದಲ ಜಂಜಾಟ್ ಕಿರಿಕಿರಿಯನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹಂಪನಗೌಡ ಬಸನಗೌಡರನ್ನು ಜೊತೆಯಾಗಿ ಕರೆದು ಕೊಂಡು ಚುನಾವಣೆಯನ್ನು ಮಾಡುತ್ತಾರೆಯೆ ಎನ್ನುವದು ಈಗ ಕುತೂಹಲ ಕೆರಳಿಸಿರುವ ಅಂಶವಾಗಿದೆ.