ಸುರೇಶ ಕೋರಿ ಅಭಿಮಾನಿಗಳ ಆಕ್ರೋಶ

ರಾಯಚೂರು,ಮಾ.೧೨- ವಿಜಯ ಸಂಕಲ್ಪ ಯಾತ್ರೆ ನಿನ್ನೆ ಲಿಂಗಸುಗೂರು ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಮ್ಮ ನಾಯಕರಾದ ಯುವಕರ ಆಶಾಕಿರಣವಾಗಿರುವ ಯೂತ್ ಐಕಾನ್ ಸುರೇಶ ಕೋರಿಯವರ ಬೆಂಬಲಿಗರು ಬ್ಯಾನರ್ ಬಸವ ಸಾಗರ ಸರ್ಕಲ್‌ನಲ್ಲಿ ಹಾಕಲಾಗಿತ್ತು.
ಜೊತೆಗೆ ಲಿಂಗಸುಗೂರಿನ ಪ್ರಮುಖ ಸ್ಥಳಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೆ ಸ್ವಾಗತ ಕೋರಿದ್ದನ್ನು ಹಾಕಲಾಗಿತ್ತು. ಆದರೆ, ಕ್ಷೇತ್ರದಲ್ಲಿ ಸುರೇಶ ಕೋರಿ ಪರ ಅಪಾರ ಸಂಚಲನವಿದ್ದದ್ದನ್ನು ಕಂಡು ದಿಗ್ಭ್ರಮೆಗೊಂಡು ಉದ್ದೇಶಪೂರ್ವಕವಾಗಿ ಬ್ಯಾನರ್‌ನ್ನು ತುಂಡುತುಂಡಾಗಿ ರಾತ್ರೋರಾತ್ರಿ ಕಳ್ಳರು ಕಾದು ಕುಳಿತವರಂತೆ ಹರಿದು ಬಿಸಾಕಿರುವುದನ್ನು ನೋಡಿದರೆ ಇದು ಯಾರು ಮಾಡಿದ್ದಾರೆ ಎಂದು ನಾವು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಸುರೇಶ್ ಕೋರಿ ಅಭಿಮಾನಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಇದು ಪಕ್ಷ ಕಲಿಸಿದ ಸಂಸ್ಕಾರವೂ ಅಲ್ಲ, ಪಕ್ಷಕ್ಕೆ ಇಂತಹದ್ದೆಲ್ಲ ಆಗು ಬರುವುದಿಲ್ಲ. ಪಕ್ಷದ ಮೊದಲ ಸುತ್ತಿನ ಮಾತುಕತೆಯ ನಂತರವೇ ನಾವು ಕ್ಷೇತ್ರದಲ್ಲಿ ಬಹಿರಂಗವಾಗಿ ಓಡಾಟ ನಡೆಸಿದ್ದು, ಪಕ್ಷದ ಹಿರಿಯರ ಪೋಟೋ ನೋಡಿಯೂ ಸಹ ಹರಿದಿದ್ದಿರಂದರೆ ನಿಮ್ಮ ನೀಚತನದ ಪರಮಾವಧಿ ಬೆತ್ತಲಾಗುತ್ತಿದೆ ಎಂದೇ ಅರ್ಥ.
ನಾವು ಮಾಡಿದ ತಪ್ಪಾದರೂ ಏನು…?
ನಿಮಗೆ ಬೇಕಾದರೆ ಖಚಿತ ನಿಯೋಜಿತ ಅಭ್ಯರ್ಥಿ ಕೋರಿಯವರ ಪೋಟೋ ಮಾತ್ರ ಕತ್ತರಿಸಬೇಕಿತ್ತು. ಹೇಳಿದ್ದರೆ ನಾವೂ ಕೂಡ ಸಹಕರಿಸುತ್ತಿದ್ದೇವೇನೂ, ಆ ಕೆಲಸ ನಾವೇ ಖುಷಿಯಿಂದ ಮಾಡುತ್ತಿದ್ದೇವು. ಇರಲಿ, ನಮ್ಮ ಮಾಸ್ ಲೀಡರ್ ಯಡಿಯೂರಪ್ಪ ಇದ್ದರೂ, ನಮ್ಮ ಪ್ರಭಾವಿ ಶಾಸಕರಾದ ಶಿವನಗೌಡ & ಸಂಸದ ರಾಜಾ ಅಮರೇಶ್ವರ ನಾಯಕರನ್ನೂ ನೋಡಿಯೂ ನಿಮಗೆ ಹರಿದು ಹಾಕಲು ಮನಸ್ಸಾದರೂ ಹೇಗೆ ಬಂತು…?
ಇದೇನಾ ನಮ್ಮ ಪಕ್ಷದ ಬದ್ಧತೆಯ ಸಿದ್ಧಾಂತ. ಖಂಡಿತ ಇದು ನಮ್ಮ ಪಕ್ಷದವರ ಕೆಲಸವಲ್ಲ, ಹಣ-ಹೆಂಡಕ್ಕಾಗಿ ಮುಖವಾಡ ಧರಿಸಿ ನಾವೂ ಬಿಜೆಪಿ ಅಂತ ಹೇಳಿ ಪಕ್ಷಕ್ಕೆ ಮುಜುಗರ ತರಿಸುವಂತಹ ಕೆಲಸ ಮಾಡುವವರ ಕೈವಾಡವಿದು, ನಿಮ್ಮ ಈ ಮನಸ್ಥಿತಿಗೆ ತೀವ್ರ ವಿಷಾಧ ವ್ಯಕ್ತಪಡಿಸುತ್ತೇವೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೂ ಜೊತೆಗೆ ನಮ್ಮ ಸಿಎಂ ಸಾಹೇಬರಿಗೂ, ಜೋಶಿ ಸಾಹೇಬರಿಗೂ, ಬಿ.ಎಲ್ ಸಂತೋಷ ಹಿರಿಯರಿಗೂ ಒಟ್ಟಾರೆ ಪ್ರಭಾಬಿ ಮುಖಂಡರಿಗೆ ಅಗೌರವ ತೋರಿಸುವುದು ಇದು ಎಷ್ಟರ ಮಟ್ಟಿಗೆ ಸರಿ. ಇದೆಲ್ಲವನ್ನೂ ಪಕ್ಷ ಗಮನಿಸುತ್ತಿದೆ. ಆಂತರಿಕ ಸಮೀಕ್ಷೆ ಮಾಹಿತಿಯ ಮನಗಂಡ ತಾವು ಪಕ್ಷ ಈ ಸಲ ಲಿಂಗಸುಗೂರಲ್ಲಿ ಯುವಕರಿಗೆ ಮಣೆ ಹಾಕುತ್ತಿರುವುದಕ್ಕೆ ಅಲ್ಲವೇ ಇದೆಲ್ಲ!? ನಿಮ್ಮ ಈ ಎಲ್ಲ ದುಷ್ಕೃತ್ಯಕ್ಕೆ ತಕ್ಕಶಾಸ್ತಿ ಅನುಭಸುತ್ತೀರಿ, ಇದಂತೂ ಕಟ್ಟಿಟ್ಟ ಬುತ್ತಿ.
ಹಿರಿಯರಿಗೆ, ಹಿರಿಯ ನಾಯಕರ ಭಾವಚಿತ್ರಗಳಿಗೆ ಗೌರವಿಸುವುದನ್ನು ಮೊದಲು ಕಲಿತುಕೊಳ್ಳಿ, ಇದು ವಿನಂತಿ ಎಂದು ತಿಳಿಸಿದರು. ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಲು ಟಿಕೆಟ್ ಯಾರಿಗೆ ಕೊಟ್ಟರೂ ನಾವು ಕ್ಷೇತ್ರದಲ್ಲಿ ಕೆಲಸ ಮಾಡಲು ಈಗಾಗಲೇ ಕಾರ್ಯಖನ್ಮುಖರಾಗಿದ್ದೇವೆ. ಪಕ್ಷದ ವರಿಷ್ಠರ ಮಾತು ನಾವು ಮೀರಲ್ಲ, ಪಕ್ಷಕ್ಕೆ ಮುಜುಗರ ಮಾಡುವ ತರುವ ಕೆಲಸವೂ ಮಾಡಲ್ಲ, ಪಕ್ಷವೇ ನಮಗೆ ಮುಖ್ಯ, ಪಕ್ಷದ ವಿರುದ್ಧ ದಿಕ್ಕಿಗೂ ನಾವು ಚಲಿಸಲ್ಲ. ಪಕ್ಷದ ಪರ ಇರಿ-ವ್ಯಕ್ತಿಯ ಪರ ಅಲ್ಲ, ನಮ್ಮ ಪಕ್ಷದ ಕಮಲವನ್ನೇ ಎತ್ತಿ ಹಿಡಿಯುತ್ತೇವೆ, ಅದಕ್ಕೆ ಬದ್ಧರಾಗುತ್ತೇವೆ.
ಪಕ್ಷದಲ್ಲಿ ೧೫ ವರ್ಷದಿಂದಲೂ ಶಿಸ್ತುಬದ್ಧವಾಗಿ ಸಂಘಟನೆ ಮಾಡುವ ಸುರೇಶ ಕೋರಿ ಶಿಸ್ತಿನ ಸಿಪಾಯಿ ಎಂದೇ ರಾಜ್ಯಮಟ್ಟದಲ್ಲಿ ಹೆಸರಾಗಿದ್ದಾರೆ. ನಿಮ್ಮ ಮಟ್ಟಕ್ಕೆ ನಾವಂತೂ ಇಳಿಯಲಾರೆವು. ಪಕ್ಷ ಕೋರಿ ಅವರಿಗೆ ಈ ಸಲ ಲಿಂಗಸಗೂರಲ್ಲಿ ಮಣೆ ಹಾಕುತ್ತಿದೆ. ಜವಾಬ್ದಾರಿಯುತವಾಗಿ ಅವರನ್ನು ನಾವು ಗೆಲ್ಲಿಸುತ್ತೇವೆ ಕೂಡ, ಆ ವಿಷಯದಲ್ಲಿ ನಾವು ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿದ್ದೇವೆ ಎಂದು ಸುರೇಶ ಕೋರಿ ಅಭಿಮಾನಿಗಳು ತಿಳಿಸಿದರು.