ಸುರೇಶ ಕುಮಸಿಗೆ ಸನ್ಮಾನ

ಕಲಬುರಗಿ,ಜು.24-ಜಿಲ್ಲಾ ಬಡ್ತಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಸುರೇಶ ಕುಮಸಿ ಅವರು ಸ್ವಯಂ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಸಂಘದ ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ ಕುಮಸಿ ಅವರು ಸೇವೆಯಿಂದ ನಿವೃತ್ತನಾದರೂ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ತನು ಮನ ಧನದಿಂದ ಸೇವೆ ಸಲ್ಲಿಸವುದಾಗಿ ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಚಿನ್ನೂರ, ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹೊಸಮನಿ, ವಿಭಾಗ ಮಟ್ಟದ ಉಪಾಧ್ಯಕ್ಷರಾದ ಭಾಗ್ಯಲತಾ ಶಾಸ್ತ್ರಿ, ಗೌರವಾಧ್ಯಕ್ಷ ಮಹಾದೇವಪ್ಪ ಚೇಂಗಟಿ, ಕಮಲಾಪೂರ ಘಟಕದ ಅಧ್ಯಕ್ಷ ತಿಪ್ಪಣ್ಣಾ ಕಲಕೋರಿ, ಕಲಬುರಗಿ ತಾಲ್ಲೂಕ ಅಧ್ಯಕ್ಷ ರಾಜೇಂದ್ರ ಝಳಕಿ, ಶಿಕ್ಷಕರಾದ ದಾದಾಸಾಬ ಹೊಸೂರ, ಚಂದ್ರಕಾಂತ ಬಿರಾದಾರ, ದಿಲೀಪ ಚವ್ಹಾಣ, ಶಿವಾನಂದ ಹಿರೇಮಠ, ಸಂಗಪ್ಪ ಮರಕುಂದಿ, ರಾಜಶೇಖರ ಪಾಟೀಲ, ಮಹಾದೇವಪ್ಪ ಬಾಚನಾಳ ಉಪಸ್ಥಿತರಿದ್ದರು.