ಸುರೇಶ್ ಶೆಟ್ಟಿ ಕಾಪು ಬಿಜೆಪಿ ಅಭ್ಯರ್ಥಿ ಹಲವರ ಹರ್ಷ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.12: ಈ‌ ಹಿಂದೆ ಬಳ್ಳಾರಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಉಡುಪಿ ಜಿಲ್ಲೆ  ಕಾಪು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದರ ಬಗ್ಗೆ ಬಳ್ಳಾರಿ ಜಿಲ್ಲಾ ಹೊಟೇಲ್ ಮತ್ತು ಬೇಕರಿ ಮಾಲೀಕರ ಅಸೋಸಿಯೇಷನ್   ಹಾಗು ಅದರಲ್ಲೂ ರೇಣುಕಾ ಗ್ರೂಪ್ಸ್ ಅವರು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು. ಸುರೇಶ್ ಶೆಟ್ಟಿ ಅವರು. ಬಳ್ಳಾರಿ ನಗರಕ್ಕೆ ಬಂದು ಹೊಟೇಲ್ ಉದ್ಯಮ ಆರಂಭಿಸಿದ್ದಲ್ಲದೆ. ಅನೇಕರಿಗೆ ಉದ್ಯೋಗ ನೀಡಿದ್ದರು. ಅಷ್ಟೇ ಅಲ್ಲದೆ ಅವರ ಸಮಾಜ ಸೇವೆ, ಸಾಂಸ್ಕೃತಿಕ ವಲಯ, ಸಾಹಿತ್ಯ ವಲಯದಲ್ಲಿ ತೊಡಗಿಸಿಕೊಂಡು ಸ್ನೇಹ ಜೀವಿಗಳಾಗಿದ್ದರು.
ಅವರು ತುಂಗಭದ್ರ ಬಂಟರ್ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಬಂಟ ಸಮುದಾಯವು ಹರ್ಷ ವ್ಯಕ್ತಪಡಿಸಿದೆ‌
ಇನ್ನಷ್ಟು ಜನ ಸೇವೆಗೆಂದು ಬಯಸಿದ್ದ ಅವರು ತಮ್ಮ ತವರು ಕ್ಷೇತ್ರ ಕಾಪುವಿನ ಶಾಸಕರಾಗಲು  ಬಯಸಿ ರಾಜಕೀಯ ವಲಯಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಆ ಕ್ಷೇತ್ರದ ಮತದಾರ, ದೇವರು ಆಶಿರ್ವಾದ ಮಾಡಲಿ ಎಂದು ಹಾರೈಸಿದ್ದಾರೆ.