ಸುರೇಖಾ ದೇಸಾಯಿಗೆ ಪಿಎಚ್‍ಡಿ ಪ್ರದಾನ

ತಾಳಿಕೋಟೆ:ಜು.30: ಪಟ್ಟಣದ ಎಚ್.ಬಿ. ದೇಸಾಯಿ ಅವರ ಪುತ್ರಿ ಸುರೇಖಾ ದೇಸಾಯಿ ಇವರು ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ಕೆ. ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ದಿ.ಸ್ಟಡಿ ಆಫ್ ಜಿಯೊಡೆಸಿಕ್ ಆರ್ಬಿಟ್ ಇನ್ ಹೊಮೊಜಿನಸ್ ಫಿನ್‍ಸ್ಟರ್ ಸ್ಪೇಸಸ್ ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ್ದರಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ದಿನಾಂಕ 22-72023, ಶನಿವಾರದಂದು ನಡೆದ 33ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರು ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಸುರೇಖಾ ದೇಸಾಯಿ ಇವರಿಗೆ ಪಿಎಚ್‍ಡಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.