ಸುರಿವ ಮಳೆಯಲಿ ಮಕ್ಕಳ ತುಂತುರು ಕಲರವ

ದಾವಣಗೆರೆ. ಜು.೧೮; ಮುಂಜಾನೆಯ ತಂಪಾದ ವಾತಾವರಣದಲ್ಲಿ, ಜಿನಿಜಿನಿ ಸುರಿಯುವ ಸುರಿಮಳೆಯಲ್ಲಿ ಬಣ್ಣ ಬಣ್ಣದ ಕೊಡೆಯನಿಡಿದು, ರೈನ್‌ಕೋಟ್ ಧರಿಸಿ ಸಂಗೀತದೊಂದಿಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು.ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಎಸ್.ಎಮ್  ವಿದ್ಯಾರ್ಥಿಗಳಿಗೆ ಮಳೆ ಧರೆಗಿಳಿಯುವ ಪರಿ, ಮಳೆ ನೀರಿನಲ್ಲಿರುವ ತಾಜಾತನ, ಹಾಗೂ ಮಳೆ ನೀರಿನಿಂದ ಆಗುವ ಉಪಯೋಗವನ್ನು ಸವಿವರವಾಗಿ ತಿಳಿಸಿದರು.ಈ ಸನ್ನಿವೇಶದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ  ಸಯ್ಯದ್ ಆರಿಫ್ ಆರ್. ರವರು ಹಾಗೂ ಶ್ರೀಮತಿ ಪ್ರೀತಾ.ಟಿ.ರೈರವರು, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಅವರು, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.