ಸುರಾರಿ  ಪ್ರಯೋಗಾತ್ಮಕ ಚಿತ್ರ

ಸಸ್ಪೆನ್ಸ್ ,ಥ್ರಿಲ್ಲರ್ ,ತನಿಖಾ ಕಥೆ ಹೊಂದಿರುವ ಪ್ರಯೊಗಾತ್ಮಕ  ಚಿತ್ರ ” ಸುರಾರಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಶಾಲಜಯ ನಾಯಕ,ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರಡ. ಡೊಳ್ಳುಹೊಟ್ಟೆಯನ್ನು ಸಿಕ್ಸ್ ಪ್ಯಾಕ್ ಆಗಿ ಮಾಡುವ ಕಥಾ ಹಂದರ ಹೊಂದಿದೆ.‌

ವಾಣಿಜ್ಯ ಮಂಡಳಿ  ಅಧ್ಯಕ್ಷ ಭಾ.ಮ ಹರೀಶ್ ಮತ್ತಿತರು ಚಿತ್ರಕ್ಕೆ  ಶುಭ ಹಾರೈಸಿದರು.

ನಿರ್ದೇಶಕ ವಿಶಾಲಾಜಯ ಮಾಹಿತಿ ನೀಡಿ, ಹೊಸ ತನದ  ಸಿನಿಮಾ ಮಾಡಬೇಕು ಎಂದಾಗ ಹೊಳೆದ ಕಥೆ.   ಬಾಲಿವುಡ್ ನ ದಂಗಲ್  ಚಿತ್ರದ ಕಥೆಗೆ ಹೊಲಿಕೆ‌ ಇಲ್ಲ. ದೇಹ  ಬದಲಾವಣೆ ಮಾತ್ರ.ಅಮೀರ್ ಖಾನ್ 9 ತಿಂಗಳು ತೆಗೆದುಕೊಂಡಿದ್ದರು.ನಾನು ನೂರು ದಿನದಲ್ಲಿ  ಬದಲಾವಣೆ ಮಾಡಿದ್ದೇನೆ. ಪಿಟ್ ನೆಸ್ ಸಲಹೆಗಾರರಿಲ್ಲದೆ ಮಾಡಬೇಡಿ. ಈ ರೀತಿ ಮಾಡುವುದು ಅಪಾಯಕಾರಿ ಎಂದರು.

ಸುರಾರಿ, ದೇವತೆಗಳ ವೈರಿ, ಅಸುರ, ಸುರಪಾನ   ಸೇವಿಸುವರನ್ನು  ಸುರಾರಿ  ಅಂತಾರೆ. ದಪ್ಪ ಆಗಲು 9 ತಿಂಗಳು ತೆಗೆದುಕೊಂಡೆ ದೇಹ ತೂಕ‌ ಇಳಿಸಲು ,100 ದಿನ‌ ತೆಗೆದುಕೊಂಡಿದ್ದೇನೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ ಎಂದು ವಿವರ ನೀಡಿದರು.

ನಾಯಕಿಯಲ್ಲಿ ಒಬ್ಬರಾದ  ಚಿತ್ರಾಲ್ ರಂಗಸ್ವಾಮಿ,ಮೂಲತಃ ಬಿಕಿನಿ ಬಾಡಿ ಬಿಲ್ಡಿಂಡರ್, ಚಿತ್ರದಲ್ಲಿ ನಾಯಕ ತರಬೇತುದಾರನಾಗಿ ನಟಿಸಿದ್ದೇನೆ ಎಂದರೆ ಮತ್ತೊಬ್ಬ ನಟಿ ಆರ್ಚನಾ ಸಿಂಗ್ , ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ಪಾತ್ರ ಮಾಡಿದ್ದೇನೆ ಎಂದರೆ ಮತ್ತೊಬ್ಬ ನಟಿ ರತನ್ಯ ಸಿಬಿಐ ಪಾತ್ರ ಮಾಡಿದ್ದೇನೆ  ಥ್ರಿಲ್ಲರ್ ಅಂಶಗಳಿವೆ ಎನ್ನುವ ವಿವರ ನೀಡಿದರು. ನಿರ್ಮಾಪಕ ಕೃಷ್ಣನ್, ಸಂಗೀತ ನಿರ್ದೇಶಕ ಅನಂತ್ ಆರ್ಯನ್  ಸೇರಿದಂತೆ ಹಲವರು ಮಾಹಿತಿ ಹಂಚಿಕೊಂಡರು.

ನಾಯಕನ ಶ್ರಮಕ್ಕೆ ಮೆಚ್ಚುಗೆ

ಸುರಾರಿ ಪ್ರಯೋಗಾತ್ಮಕ ಚಿತ್ರ, ಡೊಳ್ಳು ಹೊಟ್ಟೆ ನೋಡಿ  ಇವರೆ ನಾಯಕನಾ ಅಂದುಕೊಂಡಿದ್ದೆ‌.ಚಿತ್ರದಲ್ಲಿ ಗರಡಿ ಪೈಲ್ವಾನ್ ಪಾತ್ರ ಮಾಡಿದ್ದೇನೆ.ನಾಯಕಿಯರಲ್ಲಿ ಒಬ್ಬರ ತಂದೆ. ನಾಯಕನ‌‌ ಶ್ರಮ ಮೆಚ್ಚುವಂತಹುದು  ಯುವ ಜನರಿಗೆ ಸ್ಪೂರ್ತಿ‌ ಆಗಲಿದೆ ಎಂದರು ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್ ಕರ್