ಸುರಪುರ ಶಾಸಕ ರಾಜು ಗೌಡಗೆ ಸನ್ಮಾನ

ಬೀದರ್:ಎ.1: ನಗರಕ್ಕೆ ಭೇಟಿ ನೀಡಿರುವ ಕರ್ನಾಟಕ ರಾಜ್ಯ ಬಿಜೆಪಿಯ ಪಕ್ಷದ ಪ್ರಮುಖರು ಮತ್ತು ಸುರಪುರ ಶಾಸಕರಾದ ಶ್ರೀ ರಾಜುಗೌಡ ಅವರಿಗೆ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಸನ್ಮಾನಿಸಿದರು.
ಸರ್ಕಾರದ ಜನಪರ ಯೋಜನೆಗಳು ಪುಸ್ತಕವನ್ನು ನೀಡಿದರು.
ಬೀದರನಲ್ಲಿ ಉತ್ತರ ನಡೆಸಲಾಗಿರುವ ಜನೋಪಯೋಗಿ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಒಂದೇ ರೂಪಾಯಿಗೆ ಚಿಕಿತ್ಸೆ ನೀಡಲಾಗಿದೆ. ಸಾವಿರಾರು ಬಡವರಿಗೆ ಆಹಾರದ ಕಿಟ್, ಮಾಸ್ಕ್ ವಿತರಿಸಲಾಗಿದೆ.
ಚಿಕಿತ್ಸೆಗೆ ನೆರವು ನೀಡಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು,ಕಲ್ಯಾಣ ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷದ ವರ್ಚಸ್ಸು,ಶಕ್ತಿ ಹೆಚ್ಚಿಸುವ ಕೆಲಸವನ್ನು ಮಾಡಲಾಗಿದೆ ಎಂದು ಸೂರ್ಯಕಾಂತ ಅವರು ಹೇಳಿದರು.
ಕುಡಿಯುವ ನೀರು ಪೂರೈಸಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯನ್ನು ಅರ್ಹರಿಗೆ ತಲುಪಿಸಲು ಶ್ರಮಿಸಲಾಗಿದೆ. ಸಾವಿರಾರು ಅರ್ಹ ಪರಿವಾರಗಳಿಗೆ ಯೋಜನೆಯ ಸ್ಮಾಟ್ರ್ಕಾರ್ಡ್ ತಲುಪಿಸಲಾಗಿದೆ. ವಿಧವಾವೇತನ, ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ ಮಾಸಾಶನ ಮಂಜೂರಿಗೆ ನೆರವು ನೀಡಲಾಗಿದೆ. ಬೀದರ್ ಕ್ಷೇತ್ರದಲ್ಲಿ ಸಾವಿರಾರು ಪರಿವಾರಗಳಿಗೆ ಸರಕಾರದ ಯೋಜನೆಗಳ ಸೌಲಭ್ಯ ತಲುಪಿಸಲು ಶ್ರಮಿಸಲಾಗಿದೆ ಎಂದು ಮಾಹಿತಿ ನೀಡಿದರು.