ಸುರಪುರ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಸುರಪುರ:ನ.6: ಸುರಪುರ ನಗರಸಭೆಯು ಎರಡು ವರ್ಷಗಳಿಂದ ಸದಸ್ಯರಿಗೆ ಅಧಿಕಾರವಿಲ್ಲದೆ ನಗರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದವು ಮುಂದಿನ ದಿನಗಳಲ್ಲಿ ನಗರದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಸುಜಾತ ವೇಣುಗೋಪಾಲ ಜೇವರ್ಗಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ನಗರದ ಅಭಿವೃದ್ಧಿಗೆ ಶಾಸಕರಾದ ನರಸಿಂಹನಾಯಕ( ರಾಜುಗೌಡ) ಅವರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಕೆಲಸ ಮಾಡುವೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬೀದಿ ದೀಪಗಳು ಸಿ.ಸಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಇನ್ನೂ ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಹೇಶ್ ಪಾಟೀಲ್ ಮಾತನಾಡಿ ಶಾಸಕ ರಾಜುಗೌಡ ಅವರ ಮಾರ್ಗದರ್ಶನದಲ್ಲಿ ಅಧಿಕಾರ ನೀಡಿದ ಜನತೆಯ ವಿಶ್ವಾಸ, ನಂಬಿಕೆಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಕೆಲಸ ಮಾಡುತ್ತೆವೆ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಯಲ್ಲಪ್ಪ ನಾಯಕ, ಮಹೇಶ್ ಮಾಳಗಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಹನುಮಪ್ಪನಾಯಕ(ತಾತ), ಸದಸ್ಯರಾದ ರಾಜಾ ಪಿಡ್ಡನಾಯಕ ತಾತ, ಸೋಮನಾಥ ಡೊಣ್ಣೆಗೇರಿ, ಮಹಮ್ಮದ್ ಗೌಸ ನರಸಿಂಹಕಾಂತ ಪಂಚಮಗೀರಿ, ಅಯ್ಯಪ್ಪ ಕುಂಬಾರಪೇಟ, ಶಿವಕುಮಾರ್ ಕಟ್ಟಿಮನಿ, ನಾಸಿರ್, ಮಲ್ಲೇಶಿ, ವೇಣುಗೋಪಾಲ ಜೇವರ್ಗಿ, ಶಂಕರನಾಯಕ ಅಯ್ಯಪ್ಪ ಅಕ್ಕಿ, ಲಕ್ಷ್ಮಣ ಕಟ್ಟಿಮನಿ, ಯೂಸಪ್, ಸಿದ್ದರಾಮ, ಹಣಮಂತ ಶಹಾಪುರಕ ಸೇರಿದಂತೆ ಇತರರಿದ್ದರು.