ಸುರಪುರ ತಾಲ್ಲೂಕಿನ ಗೋನಾಲಕ್ಕೆ ಟಿಸಿ ನೀಡಿ; ಕರವೇ ಚಲಪತಿಗೌಡ ಬಣ ಮನವಿ

ಯಾದಗಿರಿ:ನ.21:ಜಿಲ್ಲೆಯ ಸುರಪೂರ ತಾಲ್ಲೂಕಿನ ದೇವರ ಗೋನಾಲ ಗ್ರಾಮಕ್ಕೆ ಬಂದ ಟಿಸಿಯನ್ನು ಮಾರಿಕೊಂಡು ತಿಂದು ಒಂದು ವರ್ಷದಿಂದ ಗ್ರಾಮಸ್ಥರು ಕತ್ತಲಲ್ಲಿ ಕೊಳೆಯುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ತಕ್ಷಣ ಟಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಸಂಘಟನೆಗಳ ಒಕ್ಕೂಟ) ಕನ್ನಡಿಗರ ಸಾರಥ್ಯದಲ್ಲಿ (ಚಳುವಳಿ ಡಾ ಚಲಪತಿಗೌಡ ನೇತೃತ್ವದ)ಯ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರು ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಜಿಲ್ಲೆಯ ಸುರಪೂರ ತಾಲೂಕಿನ ದೇವರ ಗೋನಾಲ ಗ್ರಾಮದಲ್ಲಿ ಸುಮಾರು ನಾಲ್ಕು ಐದು ವರ್ಷಗಳಿಂದ ಸುಮಾರು ಮನೆಗಳಿಗೆ ಕರೆಂಟ್ ಡಿಮ್ (ಓಲ್ಟೇಜ್) ಇಲ್ಲದ ಕಾರಣ ಹೆಚ್ಚುವರಿ ಟಿಸಿಗಾಗಿ ತಾಲ್ಲೂಕು ಸಹಾಯಕ ಅಭಿಯಂತರರಿಗೆ ಮನವಿ ಮಾಡಿದ ಸಲುವಾಗಿ ಅಧಿಕಾರಿಗಳು ಯಾದಗಿರಿಯಲ್ಲಿ ಆಧಿಕಾರಿಯವರಿಗೆ ಬೆಟಿಯಾಗಿ ಅವರು ನಮಗೆ ಸಾಮಾನು ಕೊಡಬೇಕು ಎಂದು ಹೆಳಿದಾಗ ನಾವು ಜಿಲ್ಲಾ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಭೇಟಿಯಾಗಿ ಎರಡು ದಿನಗಳಲ್ಲಿ ಸುರಪೂರ ಆಫೀಸಗೆ ಕಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು.

ಆದರೆ ಹೀಗೆ ಹೇಳಿ ಸುಮಾರು ಒಂದು ವರ್ಷಗಳಾಗತ್ತಿದ್ದರು ಇನ್ನೂವರೆಗೂ ಟಿಸಿ ಕೂರಿಸಿಲ್ಲ. ಆ ಟಿಸಿ ಯಾರಿಗೆ ಮಾರಿಕೊಂಡಿದ್ಧಾರೊ ಗೊತ್ತಿಲ್ಲ ಅರ್ಧ ಗ್ರಾಮದ ಜನತೆ ಡಿಮ್ ವೋಲ್ಟೇಜ್ ನಿಂದ ಕಳೆದ 5 ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಇದಲ್ಲದೇ ಕಳೆದ ವರ್ಷವೇ ಟಿಸಿ ಕಳಿಸಿಕೊಟ್ಟಿದ್ದಾಗಿ ಜಿಲ್ಲಾ ಮಟ್ಟದ

ಅದಿಕಾರಿಗಳು ತಿಳಿಸಿದಾಗ್ಯೂ ಇದುವರೆಗೆ ನಮ್ಮ ಈ ದೇವರ ಗೋನಾಲ ಗ್ರಾಮಕ್ಕೆ ಟಿಸಿ ಬಾರದ ಕಾರಣ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಆದ ಕಾರಣ ದಯಾಳುಗಳಾದ ತಾವು ತನಿಖೆ ಮಾಡಿ ಇನ್ನೂ ತಾಲ್ಲೂಕಿನ ಯಾವ ಹಳ್ಳಿಯಲ್ಲಿ ಟಿಸಿಯನ್ನು ಮಾರಿಕೊಂಡರೋ ಗೊತ್ತಿಲ್ಲ ಇದರ ಜತೆಯಲ್ಲಿ ತನಿಖೆ ಮಾಡಿ ಕೂಡಲೇ ಟಿಸಿ ಕೂರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಮಾಡಿಕೊಳ್ಳುತ್ತೆವೆ. ಇಲ್ಲವಾದಲ್ಲಿ ಉಗ್ರ ಹೋರಾರ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಶಿವಮೋನಯ್ಯ ಎಲ್.ಡಿ. ನಾಯಕ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಫಕೀರಪ್ಪ ನಾಯಕ, ತಾ. ಅಧ್ಯಕ್ಷ ಮಲ್ಲು ಎಸ್. ನಾಯಕ ಮಸ್ಕನಳ್ಳಿ, ಅಯ್ಯಪ್ಪ ನಾಯಕ, ದೇವರಾಜ ಭೋವಿ ಮಸ್ಕನಳ್ಳಿ, ಸುರೇಶ ಮಸ್ಕನಳ್ಳಿ, ಶರಣಪ್ಪ ಭೋವಿ ಮಸ್ಕನಳ್ಳಿ, ಮಾಳಿಂಗರಾಯ ಪೂಜಾರಿ, ಸಾಬಯ್ಯ ಪುಟಪಾಕ್ ಇನ್ನಿತರರು ಇದ್ದರು.