ಸುರಪುರ ಅರಸರ ಶೌರ್ಯ ಅಪ್ರತಿಮವಾದದ್ದು :ಹಾರಿಕಾ ಮಂಜುನಾಥ್

ಕೆಂಭಾವಿ: ಮೇ.1:ಸುರಪುರ ಅರಸರ ಶೌರ್ಯ ಬ್ರಿಟೀಷರ ಹುಟ್ಟಡಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅಂಥಾ ಶೂರತ್ವದ ನಾಡಿನಲ್ಲಿ ನಿಂತು ಮಾತನಾಡುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ನಾಡಿನ ಖ್ಯಾತ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ ಹೇಳಿದರು.

ಕರಡಕಲ್ ಕೋರಿ ಸಿದ್ಧೇಶ್ವರ ಶಾಖಾ ಮಠದಲ್ಲಿ ಭಾನುವಾರ ಶ್ರೀ ಕೋರಿ ಸಿದ್ಧೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 23ನೇ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಶೂರರ ಪುರ (ಸುರಪುರ) ಅರಸರ ವಂಶದಲ್ಲಿ ಹೊಟ್ಟಿದ್ದ ಚಿಕ್ಕ ವೆಂಕಟಪ್ಪ ನಾಯಕನು ತನ್ನ 18ನೇ ವಯಸ್ಸಿನಲ್ಲಿ ಬ್ರಿಟೀಶರ ಜೊತೆ ಹೋರಾಡಿ ಶೌರ್ಯ ಮೆರೆದ ಮಹಾ ನಾಯಕನಾಗಿದ್ದಾನೆ. ಭಾರತೀಯ ಸಂಸ್ಕøತಿ ಹಲವು ಬಗೆಯ ವೈಶಿಷ್ಟ??ತೆಗಳಿಂದ ಕೂಡಿದ್ದು ಅಂಥಾ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಪಡೆ ಮಾಡಬೇಕು ಎಂದು ಹೇಳಿದರು. ಹಣೆಗೆ ಕುಂಕುಮ ಹಚ್ಚುವುದು ಪ್ರತಿಯೊಬ್ಬ ಹಿಂದೂ ವ್ಯಕ್ತಿಯ ಸಂಸ್ಕೃತಿಯ ದ್ಯೋತಕವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮುತೈದೆಯರಿಗೆ ವಿಶೇಷ ಗೌರವವಿದ್ದು ಮುತೈದೆತನವನ್ನು ತೋರಿಸುವ ತಾಳಿ, ಕುಂಕುಮ, ಕೈಬಳೆ, ಕಾಲುಂಗುರ, ಸೀರೆ ಇವು ಐದನ್ನು ಮದುವೆಯಾದ ಮಹಿಳೆಯರು ತಪ್ಪದೆ ಧರಿಸಬೇಕು ಎಂದು ಮನವಿ ಮಾಡಿದರು.

ಇಂದಿನ ದಿನಗಳಲ್ಲಿ ಮದುವೆಗಳು ಸಂಪ್ರದಾಯವನ್ನು ಮರೆಯುತ್ತಿದ್ದು ಆಡಂಬರದ ಅವಸರದಲ್ಲಿ ಹಿಂದೂ ಸಂಪ್ರದಾಯಬದ್ಧವಾದ ಮದುವೆಗೆ ಕಡಿವಾಣ ಬೀಳುತ್ತಿರುವುದು ವಿಷಾದದ ಸಂಗತಿ ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಇಂಥಾ ಸಾಮೂಹಿಕ ವಿವಾಹಗಳು ನೆರವೇರುತ್ತಿರುವುದು ಅತೀವ ಸಂತೋಷ ತಂದಿದೆ ಎಂದು ಹೇಳಿದರು. ಇಂಥಾ ಕಾರ್ಯ ಮಾಡುತ್ತಿರುವ ಪೀಠಾಧಿಪತಿ ಶ್ರೀ ಶಾಂತರುದ್ರಮುನಿ ಸ್ವಾಮೀಜೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಾಪುರಸದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಕೊಡೇಕಲ್‍ನ ಶ್ರೀ ಶಿವಕುಮಾರ ಸ್ವಾಮಿಗಳು ಮಾತನಾಡಿದರು. ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು.

ಪೀಠಾಧಿಪತಿ ಶ್ರೀ ಶಾಂತರುದ್ರಮುನಿ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಕೆಂಭಾವಿ ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು, ಬೀರಪ್ಪ ಶರಣರು, ಸಂಗಮೇಶ ಯಾದಗಿರಿ, ಸಂಗನಗೌಡ ಮರಡ್ಡಿ, ಮಲಕನಗೌಡ ಪಾಟೀಲ, ತಿಪ್ಪರಾಜ ಕುಲಕರ್ಣಿ, ಮಹಿಪಾಲರೆಡ್ಡಿ ಡಿಗ್ಗಾವಿ, ವೆಂಕಟಪ್ಪ ನಾಯಕ, ಬಾಪುಗೌಡ ಪೆÇಲೀಸ್ಪಾಟೀಲ, ಪಂಚಾಕ್ಷರಿ ಶೆಳ್ಳಗಿ ಇದ್ದರು. ಮಲ್ಲಿಕಾರ್ಜುನಸ್ವಾಮಿ ನಿರೂಪಣೆ ಮಾಡಿದರು, ಶಿವಪ್ರಕಾಶ ಸ್ವಾಮಿ ಸ್ವಾಗತಿಸಿದರು. ಬಸವರಾಜ ಭಂಟನೂರ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.