ಸುರಕ್ಷಿತವಾಗಿರಲು ಮನೆಯಲ್ಲಿರಿ ಅಭಿಯಾನ

ಚಿತ್ರದುರ್ಗ. ಮೇ.೨೧:  ಕೊರೋನ ರಾಷ್ಟ್ರವ್ಯಾಪಿ ಹಬ್ಬುತ್ತಿರುವ ಸಂದರ್ಭದಲ್ಲಿ ಜನರು ಅಡ್ಡಾದಿಡ್ಡಿಯಾಗಿ ಅಡ್ಡಾಡದೇ ಮನೆಯಲ್ಲೇ ಸುರಕ್ಷಿತವಾಗಿ ಇದ್ದು ಜೀವ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ರೋಗದ ಚಿಕಿತ್ಸೆಗಿಂತ ರೋಗ ಹಬ್ಬದಂತೆ ತಡೆಯುವಲ್ಲಿ ನಾವು ಯಶಸ್ವಿಯಾದರೆ, ಚಿಕಿತ್ಸೆಯ ಮೇಲೆ ಬೀಳುತ್ತಿರುವ ಒತ್ತಡವನ್ನ ಕಡಿಮೆಗೊಳಿಸಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಸಂಚಾರಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ “ಸುರಕ್ಷತೆಗಾಗಿ ಮನೆಯಲ್ಲಿರಿ” ಎಂಬ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊದಲನೇ ಅಲೆಯಲ್ಲಿ ಬಂದ ಕರೊನ ವೈರಸ್ಸಿಗೂ, 2ನೇ ಅಲೆಯಲ್ಲಿ ಬಂದ ವೈರಾಣುವಿನಲ್ಲಿ ಆಗಿರುವ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕಾಗಿದೆ. ಅದು ತನ್ನ ಜೀನ್ಸ್ ಗಳನ್ನು ಬದಲಾವಣೆ ಮಾಡಿಕೊಂಡು 3ನೇ ಅಲೆಯಲ್ಲಿ ಮಕ್ಕಳ ಮೇಲೆ ಆಕ್ರಮಣ ಮಾಡುವುದು. ರೂಪಾಂತರ ತಳಿಯನ್ನು ಎದುರಿಸುವಷ್ಟು ಶಕ್ತಿ ಶಾಲಿಯಾಗಿ ನಾವು ನಮ್ಮ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕು. ಸರ್ಕಾರ ಮತ್ತು ವೈದ್ಯಕೀಯ ತಜ್ಞರು ವಿಧಿಸಿರುವ ನಿಯಮಾವಳಿಗಳ ಪಾಲಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.ಆರ್ಥಿಕ ಅಭಿವೃದ್ಧಿ, ಎಲ್ಲಾ ವಸ್ತುಗಳನ್ನು ಬಾಚಿಕೊಳ್ಳುವ ಕೊಳ್ಳುಬಾಕ ಸಂಸ್ಕೃತಿಯ ನೆಪದಲ್ಲಿ, ನಾವು ಅಂಗಡಿಗಳ ಮೇಲೆ ಮುಗಿಬಿದ್ದು, ಸಾಮಾನು ಕೊಳ್ಳುವ ಅವಸರದಲ್ಲಿ, ರೋಗಾಣು ಹರಡುತ್ತಿರುವುದೇ ನಮ್ಮ ಅರಿವಿಗೆ ಬರುತ್ತಿಲ.್ಲ ಜನರಿಗೆ ಸ್ವ ನಿಯಂತ್ರಣದ ಜಾಗೃತಿ ಮೂಡಿಸಬೇಕಾಗಿದೆ. 
ಆಸ್ಪತ್ರೆಗಳ ಮೇಲೆ ಬೀಳುತ್ತಿರುವ ಒತ್ತಡ, ಅಸಂಖ್ಯ ರೋಗಿಗಳನ್ನ ನಿಬಾಯಿಸಲು ಹರಸಾಹಸ ಪಡುತ್ತಿರುವ ದೃಶ್ಯ ನಮ್ಮನ್ನು ಎಚ್ಚರಿಸುತ್ತಿದೆ. ಮನೆಯಲ್ಲಿದ್ದುಕೊಂಡು ಈ ಕೋಲಾಹಲ ಶಾಂತವಾಗುವಂತೆ ಮಾಡಬೇಕಾಗಿದೆ ಎಂದರು.
ಅನವಶ್ಯಕವಾಗಿ ಓಡಾಡುವುದು, ಗುಂಪು ಸೇರುವುದು, ಜಾತ್ರೆ ಮಾಡುವುದು, ಹುಟ್ಟಿದ ದಿನ ಆಚರಣೆ, ಚುನಾವಣೆಗಳಲ್ಲಿ ಬಾಗವಹಿಸಿ, ನಾವು ತಪುö್ಪ ಹೆಜ್ಜೆ ಇಟ್ಟೆವು. ತಾಳಿದವನು ಬಾಳಿಯಾನು ಎಂಬ ಸೂತ್ರದಂತೆ, ಸ್ವಲ್ಪ ತಾಳ್ಮೆಯಿಂದ ವರ್ತಿಸಿದರೆ, ನಮ್ಮ ಜೀವನ ಪೂರ್ತಿ ಆರೋಗ್ಯವನ್ನ ಗಳಿಸಿಕೊಳ್ಳಬಹುದು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯನ್ನು ನಾವು ಮರೆÀಯದೇ, ಮನೆÀಯಲ್ಲೇ ಇದ್ದು, ಸುರಕ್ಷತವಾಗಿರೋಣ ಎಂದರು.
ಮನೆಯ ಚಿತ್ರವನ್ನು ಪ್ರದರ್ಶಿಸಿ, ಸುರಕ್ಷಿತವಾಗಿ ಮನೆಯಲ್ಲಿರಿ ಎಂಬ ಬಿತ್ತಿ ಪತ್ರಗಳನ್ನ ಪ್ರದರ್ಶಿಸಲಾಯಿತು.  ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್, ಎಐಸಿ ಮಂಜುನಾಥ್, ಪ್ರಸನ್ನ ಕುಮಾರ್, ಎಎಸ್‌ಐ, ನರೇಂದ್ರ ಬಾಬು, ಶಿವರಾಮ್, ಹೆಡ್ ಕಾನ್ಸ್ಟೆಬಲ್ ಪರುಷುರಾಮ್, ಪಿಸಿ ಪ್ರಸನ್ನಕುಮಾರ್ ಮತ್ತು ಸಂಚಾರಿ ಪೋಲಿಸ್ ಸಿಬ್ಬಂದಿ, ಕಮಲೇಶ್ ಜೈನ್. ಮಹೇಶ್ ಕೆ. ಎನ್. ಮುಖ್ಯ ಶಿಕ್ಷಕರು, ಶ್ರೀ ಆಂಜನೇಯ ಸ್ವಾಮಿ ಪ್ರೌಡ ಶಾಲೆ, ಕಡ್ಲೆಗುದ್ದು. ಸಾಜಿದ್ ದಾದು ಹಾಜರಿದ್ದರು.