ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ

ಬೆಂಗಳೂರು, ಮಾ.೧೭- ಬೆಂಗಳೂರಿನ ಸರ್ವಜ್ಞ ನಗರ ವ್ಯಾಪ್ತಿಯಲ್ಲಿ ೬ ಸುರಂಗ ಮಾರ್ಗಗಳಿಗೆ ಸಂಸದ ಪಿ.ಸಿ.ಮೋಹನ್ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ನಗರದಲ್ಲಿಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ದಡಿಯಲ್ಲಿ ೬ ಸುರಂಗ ಮಾರ್ಗಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಸರ್ವಜ್ಞ ನಗರ ಓಬಿಸಿ ಅಧ್ಯಕ್ಷ ಕೃಷ್ಣ ಆನಂದ್, ಹಲವು ದಿನಗಳಿಂದ ಈ ಭಾಗದಲ್ಲಿ ಸುರಂಗ ಮಾರ್ಗದ ಅವಶ್ಯಕತೆ ಇತ್ತು. ಇದೀಗ ಇಲ್ಲಿನ ಜನರ ಕನಸು ಈಡೇರಿದೆ. ಸುರಂಗ ಮಾರ್ಗದಿಂದ ಸಂಚಾರ ದಟ್ಟಣೆ ತಪ್ಪಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆಜೆ ಜಾರ್ಜ್, ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಮಂಡಳ ಅಧ್ಯಕ್ಷರಾದ ಮುನಿರಾಜ್ ಕಾರ್ನಿಕ್ ಹಾಗೂ ಹೆಚ್‌ಎಸ್ ರಮೇಶ್ ಹಾಜರಿದ್ದರು.