ಸುಮ್ಮನೇ ಧ್ವಜ ಕಟ್ಟಿ ಬಿಟ್ಟು ದೇವಾಸ್ಥಾನ ಇತ್ತು ಅಂದ್ರೆ ಸುಮ್ಮನಿರಕ್ಕಾಗತ್ತ: ಸಚಿವ ವೆಂಕಟೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.30:- ಯಾವ ಕಾಲದಿಂದ ಹನುಮ ಧ್ವಜ ಇತ್ತು ಎಷ್ಟು ವರ್ಷದಿಂದ ಇತ್ತು ಎಷ್ಟು ದಿವಸದಿಂದ ಇತ್ತು ಮೊದಲುಇದಕ್ಕೆ ಬಿಜೆಪಿಯವರುಉತ್ತರ ಹೇಳಲಿ ಎಂದುರೇμÉ್ಮ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ವಾಗ್ದಾಳಿ ನಡೆಸಿದರು.
ಮಂಡ್ಯದ ಕೆರೆಗೋಡು ಧ್ವಜ ವಿವಾದ ಸಂಬಂಧ ಕೊಳ್ಳೇಗಾಲದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ಪೂಜೆ ಮಾಡೋ ದಿವಸ ಹನುಮನ ಧ್ವಜ ನೆಟ್ಟು ಈಗ ಅಲ್ಲೇ ಇರಬೇಕು ಅಂದ್ರೆ ಹೆಂಗಾಗುತ್ತೆ. ಪೂಜೆ ಮಾಡಿದ ಮೇಲೆ ತಗೀಬೇಕಲ್ವಾ ಸುಮ್ಮನೆ ಧ್ವಜ ನೆಟ್ ಬಿಟ್ಟು ಇಲ್ಲೇ ದೇವಸ್ಥಾನ ಇತ್ತು ಅಂದ್ರೆ ಬಿಟ್ಕೊಡಕ್ಕಾಗುತ್ತಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯರು ವಿವಾದ ಮಾಡ್ತಿದ್ದಾರೆ. ಅವರಿಗೆ ಬುದ್ದಿ ಇಲ್ಲದೆ ಇದೆಲ್ಲಾ ಮಾಡ್ತಾಇದ್ದಾರೆ. ಸಣ್ಣ ಪುಟ್ಟದ್ದನ್ನೆಲ್ಲಾದೊಡ್ಡದು ಮಾಡ್ತಾ ಇದ್ದಾರೆ ಇದು ಗಲಾಟೆ ಮಾಡೋ ವಿಚಾರನೇ ಅಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ನಾವೂ ಹಿಂದೂಗಳೇ ಅಲ್ವಾ ರಾಮನನ್ನೂ ಪೂಜೆ ಮಾಡ್ತೀವಿ ಈಶ್ವರ, ಹನುಮ ದೊಡ್ಡಮ್ಮ ಚಿಕ್ಕಮ್ಮ, ತಾಯಮ್ಮ ಎಲ್ಲರನ್ನೂ ಪೂಜೆ ಮಾಡ್ತೀವಿ ಎಂದು ತಿರುಗೇಟು ಕೊಟ್ಟರು.